ಮನೋರಂಜನೆ

ಬೆರಣಿ ತಟ್ಟುತ್ತಿರುವ ಕಾಮಸೂತ್ರ ಬೆಡಗಿ ಶೆರ್ಲಿನ್

Pinterest LinkedIn Tumblr


ಕಾಮಸೂತ್ರ 3ಡಿ ಎಂಬ ಚಿತ್ರದಿಂದ ಇಡೀ ಜಗತ್ತಿಗೆ ಪರಿಚಯವಾದ ಬೆಡಗಿ ಶೆರ್ಲಿನ್ ಚೋಪ್ರಾ. ಆ ಚಿತ್ರದಲ್ಲಿನ ಅವರ ಹಾಟ್ ಭಂಗಿಗಳು ಪಡ್ಡೆಗಳ ಪಾಲಿಗೆ ಪಂಚಾಮೃತವಾಗಿದ್ದವು. ಆ ಬಳಿಕ ನಾಪತ್ತೆಯಾದ ಶೆರ್ಲಿನ್ ಈಗ ಕಡಿಮೆ ಬಜೆಟ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಆ ಚಿತ್ರದ ಹೆಸರು ಚಮೇಲಿ ಅಂತ. ಸದ್ಯಕ್ಕೆ ಲಕ್ನೋದಲ್ಲಿ ಶೂಟಿಂಗ್ ಭರದಿಂದ ಸಾಗಿದೆ. ಬೆರಣಿ ತಟ್ಟುತ್ತಾ ಶೆರ್ಲಿನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋವನ್ನು ಸ್ವತಃ ಅವರೇ ಶೇರ್ ಮಾಡಿಕೊಂಡು ಎಲ್ಲರಿಗೂ ಶಾಕ್ ನೀಡಿದ್ದಾರೆ.

ಕಾಮಸೂತ್ರ 3ಡಿ ಚಿತ್ರದಲ್ಲಿ ಬಹುತೇಕ ನಗ್ನವಾಗಿದ್ದ ಶೆರ್ಲಿನ್‍ರನ್ನುಈ ರೀತಿ ನೋಡಿ ಸಿನಿಮಾ ಪ್ರಿಯರು ಬೆಚ್ಚಿಬಿದ್ದಿದ್ದಾರೆ. ಕಾಮಸೂತ್ರ ಚಿತ್ರ ಭಾರತದಲ್ಲಿ ಬಿಡುಗಡೆಯಾಗದಿದ್ದರೂ ಚಿತ್ರದ ಸ್ಟಿಲ್ಸ್ ಮಾತ್ರ ಭಾರಿ ಸದ್ದು ಮಾಡಿದ್ದವು. ಅಂದಹಾಗೆ ಚಮೇಲಿ ಚಿತ್ರ ಪಕ್ಕಾ ಕಾಮಿಡಿ ಚಿತ್ರವಂತೆ.

Comments are closed.