ರಾಷ್ಟ್ರೀಯ

ಕಾರು ಹಾಯಿಸಿ ಮುಖ್ಯಮಂತ್ರಿ ಸಂಬಂಧಿಯ ಬರ್ಬರ ಹತ್ಯೆ

Pinterest LinkedIn Tumblr


ಚಂದೀಘಡ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್ ಸಂಬಂಧಿ ಯುವಕನನ್ನು ಚಂದಿಘಡದಲ್ಲಿ ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ.

ಶುಕ್ರವಾರ ನಸುಕಿನ ಜಾವ ಸ್ನೇಹಿತರ ನಡುವೆ ಉಂಟಾದ ಜಗಳ ಹತ್ಯೆಯಲ್ಲಿ ಕೊನೆಗೊಂಡಿದ್ದು ಮೃತ ಆಕಾಂಕ್ಷ ಸೇನ್ ಸಿಂಗ್ ಪತ್ನಿ ಪ್ರತಿಭಾ ಸಿಂಗ್ ಸಹೋದರನ ಪುತ್ರನಾಗಿದ್ದಾನೆ.

ಮನೆಯ ಮುಂದೆಯೇ ಈ ಹತ್ಯೆ ನಡೆದಿದ್ದು ಆಕಾಂಕ್ಷ್ ಸೇ‌ನ್‌ನ ಮೇಲೆ ಬಿಎಂಡಬ್ಲ್ಯು ಕಾರ್ ಹರಿಸಿ 50ಮೀಟರ್‌ಗಳವರೆಗೆ ದೇಹವನ್ನು ಎಳೆದೊಯ್ಯಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಆಕಾಂಕ್ಷ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಸಾವನ್ನಪ್ಪಿದ್ದಾರೆ.

ಮೃತ ಯುವಕ ಕೆಫೆ ಮಾಲೀಕನಾಗಿದ್ದು,ಈತನ ಸ್ನೇಹಿತರಾದ ಹರ್ ಮೆಹ್ತಾಬ್ ಮತ್ತು ಬಾಲರಾಜ್ ವಿರುದ್ಧ ಹತ್ಯೆ ಪ್ರಕರಣ ದಾಖಲಾಗಿದೆ.

ಆರೋಪಿಗಳಲ್ಲೊಬ್ಬನಾದ ಹರ್ ಮೆಹ್ತಾಬ್ ಪಂಜಾಬ್‌ನ ಪ್ರಭಾವಿ ರಾಜಕೀಯ ಕುಟುಂಬದ ಜತೆ ಸಂಪರ್ಕ ಹೊಂದಿದ್ದಾನೆ ಎಂದು ಹೇಳಲಾಗುತ್ತಿದ್ದು , ಹೀಗಾಗಿ ಪೊಲೀಸರು ಬಂಧನಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Comments are closed.