ರಾಷ್ಟ್ರೀಯ

ಪನ್ನೀರ್‌ ಸೆಲ್ವಂ ಗುಂಪು ಸೇರಿದ ಸಚಿವ ಪಾಂಡಿರಾಜನ್‌!

Pinterest LinkedIn Tumblr
Chennai: 

ಚೆನ್ನೈ: ತಮಿಳುನಾಡು ರಾಜಕೀಯ ಬೆಳವಣಿಗೆಯಲ್ಲಿ ಶಾಲಾ ಶಿಕ್ಷಣ ಸಚಿವ ಕೆ. ಪಾಂಡಿರಾಜನ್‌ ಹಾಗೂ ಇಬ್ಬರು ಸಂಸದರು ಶನಿವಾರ ಉಸ್ತುವಾರಿ ಮುಖ್ಯಮಂತ್ರಿ ಒ. ಪನ್ನೀರ್‌ ಸೆಲ್ವಂ ಅವರ ಗುಂಪು ಸೇರಿದ್ದಾರೆ.

ಮುಖ್ಯಮಂತ್ರಿ ಗದ್ದುಗೆಗೇರಲು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರು ಕಸರತ್ತು ನಡೆಸಿದ್ದು, ಶಾಸಕರ ಬೆಂಬಲದ ಪರೇಡ್‌ ನಡೆಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಪನ್ನೀರ್‌ ಸೆಲ್ವಂ ಅವರು ಸಂಸದರು ಹಾಗೂ ಹಾಲಿ ಸಚಿವರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವ ಮೂಲಕ ಗುಂಪು ರಾಜಕೀಯದ ಮೇಲಾಟದಲ್ಲಿ ತೊಡಗಿದ್ದಾರೆ. ಈ ಇಬ್ಬರದ್ದೂ ಗದ್ದುಗೆಗಾಗಿ ಗುದ್ದಾಟ.

ಇಂದಿನ ಬೆಳವಣಿಗೆಯಲ್ಲಿ ಪಾಂಡಿರಾಜನ್‌ ಅವರು, ಗ್ರೀನ್‌ವೇಸ್‌ ರೋಡ್‌ನಲ್ಲಿರವು ಸೆಲ್ವಂ ಅವರ ಅಧಿಕೃತ ನಿವಾಸಕ್ಕೆ ಮಾಜಿ ಸಚಿವ ಕೆ.ಪಿ. ಮುನ್ಸ್ವಾಮಿ ಮತ್ತು ರಾಜ್ಯಸಭಾ ಸದಸ್ಯ ವಿ. ಮೈತ್ರೆಯನ್‌ ಅವರೊಂದಿಗೆ ಭೇಟಿ ನೀಡಿ ಸೆಲ್ವಂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಂಸದರ ಬೆಂಬಲ
ಎಐಎಡಿಎಂಕೆಯ ನಾಮ್ಕಲ್‌ ಮತ್ತು ಕೃಷ್ಣಗಿರಿ ಕ್ಷೇತ್ರದ ಸಂಸದರಾದ ಪಿ.ಆರ್‌. ಸುಂದರಮ್‌ ಮತ್ತು ಕೆ. ಅಶೋಕ್‌ ಕುಮಾರ್‌ ಅವರು ಪನ್ನೀರ್‌ ಸೆಲ್ವಂ ಅವರು ಗುಂಪು ಸೇರಿದ್ದು, ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ಅವರ ವಿರುದ್ಧ ತಿರುಗಿಬಿದ್ದಿದ್ದಾರೆ.

Comments are closed.