ಕ್ರೀಡೆ

ಅನುಷ್ಕಾ ಶರ್ಮಾಗಾಗಿ ಕೊಹ್ಲಿ ಮಾಡಿದ ರಹಸ್ಯ ಕೆಲಸ ಏನು?

Pinterest LinkedIn Tumblr


ಮುಂಬೈ: ಗೆಳತಿ ಅನುಷ್ಕಾ ಶರ್ಮಾ ಪರ ವಿರಾಟ್ ಕೊಹ್ಲಿ ಸದಾ ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಗೆಳತಿಗಾಗಿ ಕೊಹ್ಲಿ ಸೀಕ್ರೆಟ್ ಆಗಿ ಒಂದು ಕೆಲಸ ಮಾಡಿದ್ದಾರೆಂಬ ಗುಸು ಗುಸು ಈಗ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

ಅನುಷ್ಕಾ ಶರ್ಮಾ ಅಭಿನಯದ ಫಿಲೌರಿ ಇನ್ನೇನು ಬಿಡುಗಡೆಯಾಗಲಿದೆ. ಈ ಚಿತ್ರದ ಪ್ರಚಾರಕ್ಕಾಗಿ ಅನುಷ್ಕಾ ಓಡಾಡುತ್ತಿದ್ದಾರೆ. ಕೊಹ್ಲಿ ಕೂಡಾ ಗೆಳತಿಯ ಸಿನಿಮಾವನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡುತ್ತಾರೆ ಎಂದೇ ಸುದ್ದಿಯಾಗಿತ್ತು. ಆದರೆ ಅದನ್ನೂ ಮೀರಿದ ಕೆಲಸವೊಂದನ್ನು ಮಾಡಿದ್ದಾರೆ ಎಂಬುದು ಬಯಲಾಗಿದೆ.

ಕೊಹ್ಲಿ ಈ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ. ಅದೂ ಯಾರಿಗೂ ಗೊತ್ತಾಗದ ರೀತಿಯಲ್ಲಿ ಎಂದು ವರದಿಯಾಗಿದೆ. ವಿರಾಟ್ ಗೆ ಈ ಕತೆ ತುಂಬಾ ಇಷ್ಟವಾಗಿದೆಯಂತೆ. ಕತೆ ಕೇಳಿದ ಮೇಲೆ ಸಿನಿಮಾದ ಪ್ರಚಾರ ಮಾತ್ರವಲ್ಲ, ಹಣ ಹಾಕಲೂ ಮುಂದೆ ಬಂದಿದ್ದಾರೆ ಎಂದು ಮೂಲಗಳು ಹೇಳಿವೆ. ನೋಡಿ ಗೆಳತಿಗಾಗಿ ಕ್ರಿಕೆಟ್ ಬಿಟ್ಟು ಏನೆಲ್ಲಾ ಮಾಡ್ತಿದ್ದಾರೆ ಕೊಹ್ಲಿ?

Comments are closed.