ಮನೋರಂಜನೆ

ಕನ್ನಡದ ‘ರಾಮಾ ರಾಮಾ ರೇ’ ಹಿಂದಿಗೆ ರಿಮೇಕ್ ಅಲ್ಲ ಡಬ್

Pinterest LinkedIn Tumblr


ಬೆಂಗಳೂರು: ಪ್ರೇಕ್ಷಕರಿಂದ ಬಾರೀ ಮೆಚ್ಚುಗೆ ಗಳಿಸಿರುವ ‘ರಾಮಾ ರಾಮಾ ರೇ’ ಚಿತ್ರ ಹಿಂದಿ ಭಾಷೆಗೆ ಡಬ್ ಆಗಲಿದೆ.

ಡಿ.ಸತ್ಯಪ್ರಕಾಶ್ ನಿರ್ದೇಶನದ ಈ ಚಿತ್ರದಲ್ಲಿ ಕೆ. ಜಯರಾಮ್, ನಟರಾಜ್ ಮತ್ತು ಬಿಂಬಶ್ರೀ ನೀನಾಸಂ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು.

ಬೆಂಗಳೂರು ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿಯೂ ಪ್ರದರ್ಶನ ಕಾಣುತ್ತಿರುವ ಈ ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಿದ್ದಾರೆ.

‘ರಾಮ ರಾಮ ರೇ’ ಚಿತ್ರವನ್ನು ಹಿಂದಿಯಲ್ಲಿ ರಿಮೇಕ್ ಮಾಡಲಾಗುತ್ತಿದೆ ಎಂಬ ಸುದ್ದಿ ಈ ಹಿಂದೆ ಕೇಳಿ ಬಂದಿತ್ತು. ಆದರೆ ಈಗ ಪ್ರಸ್ತುತ ಚಿತ್ರವನ್ನು ರಿಮೇಕ್ ಅಲ್ಲ ಹಿಂದಿಗೆ ಡಬ್ ಮಾಡಲಾಗುತ್ತಿದೆ ಎಂದು ಬಲ್ಲಮೂಲಗಳು ಹೇಳಿವೆ.

Comments are closed.