ಅಂತರಾಷ್ಟ್ರೀಯ

ಡೆರ್ ಸ್ಪೈಗೆಲ್‌ನ ಪತ್ರಿಕೆ ಮುಖಪುಟದಲ್ಲಿ ಟ್ರಂಪ್ ಸ್ವಾತಂತ್ರ್ಯ ದೇವಿ ತಲೆ ಕಡಿದ ಚಿತ್ರ!

Pinterest LinkedIn Tumblr


ಬರ್ಲಿನ್, ಫೆ. ೫- ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಾ ಸ್ವಾತಂತ್ರ್ಯ ಪ್ರತಿಮೆ (ಲಿಬರ್ಟಿ ಸ್ಟ್ಯಾಚು)ಯ ತಲೆ ಕಡಿದು ಕೈಯಲ್ಲಿ ಇಟ್ಟುಕೊಂಡಿರುವ ಚಿತ್ರ ಜರ್ಮನಿಯ ನಿಯತಕಾಲಿಕ ಡೆರ್ ಸ್ಪೈಗೆಲ್‌ನ ಮುಖಪುಟದಲ್ಲಿ ಪ್ರಕಟವಾಗಿದೆ.
ಟ್ರಂಪ್ ಅವರು ಒಂದು ಕೈಯಲ್ಲಿ ಲಿಬರ್ಟಿ ಪ್ರತಿಮೆಯ ತಲೆಯನ್ನು ಇನ್ನೊಂದು ಕೈಯಲ್ಲಿ ಚೂರಿಯನ್ನು ಇಟ್ಟುಕೊಂಡಿದ್ದು, ಕಡಿದ ತಲೆಯಿಂದ ನೆತ್ತರು ತೊಟ್ಟಿಕ್ಕುತ್ತಿರುವ ಈ ಚಿತ್ರ ಜರ್ಮನಿ ಒಳಗೆ ಮತ್ತು ಹೊರಗೆ ಭಾರಿ ವಿವಾದವನ್ನು ಹುಟ್ಟುಹಾಕಿದೆ.
ಈ ಚಿತ್ರದ ವಿನ್ಯಾಸವನ್ನು ಱ್ಯೂಬನ್ ಮೂಲದ ಎಡಲ್ ರೋಡಿಗಸ್ ಎಂಬುವವರು ಮಾಡಿದ್ದು, ಈತ ಅಮೆರಿಕಾಗೆ ರಾಜಕೀಯ ನಿರಾಶ್ರಿತರನಾಗಿ ಬಂದವನಾಗಿದ್ದಾನೆ.
ಪ್ರತೀಕ
ಅಧ್ಯಕ್ಷ ಟ್ರಂಪ್ ಅವರು ದೇಶದ ಸಂವಿಧಾನ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದ್ದಾರೆ ಎಂಬುದರ ಸಂಕೇತವಾಗಿ ಈ ಚಿತ್ರವನ್ನು ವಿನ್ಯಾಸಗೊಳಿಸಲಾಗಿದೆ.
ಇದೇ ವೇಳೆ ಟ್ರಂಪ್ ಹಾಗೂ ಅಮೆರಿಕಾ ಸಂಬಂಧಗಳು ಅಷ್ಟಕ್ಕೆ ಅಷ್ಟೆ ಇದೆ. ಜರ್ಮನಿ ಛಾನ್ಸಲೆರ್ ಆಗೇ ಮರ್ಕೆಲ್‌ರವರ ಅಮೆರಿಕಾ ಕುರಿತ ನಿಲುವು ಹಾಗೂ ಕೆಲವು ಹೇಳಿಕೆಗಳಿಗೆ ಟ್ರಂಪ್ ತೀವ್ರ ಆಕ್ಷೇಪ ಮತ್ತು ವಿರೋಧ ವ್ಯಕ್ತಪಡಿಸಿದ್ದರು ಎಂದೂ ಮೂಲಗಳು ತಿಳಿಸಿವೆ.

Comments are closed.