ಮುಂಬೈ

ಬಿಜೆಪಿಯೊಂದಿಗಿನ ಮೈತ್ರಿಯಿಂದ ಕೈ ಸುಟ್ಟುಕೊಂಡಿದ್ದೇವೆ: ಉದ್ಧವ್ ಠಾಕ್ರೆ

Pinterest LinkedIn Tumblr


ಮುಂಬೈ: ಉತ್ತಮ ಉದ್ದೇಶದಿಂದಲೇ ಶಿವಸೇನೆ ರಾಜಕೀಯ ಪಕ್ಷಗಳೊಂದಿಗೆ ಮೈತ್ರಿ ಮಾಡುತ್ತದೆ. ನಮಗೆ ಯಾವುದೇ ಪಕ್ಷದೊಂದಿಗೆ ಸಹಭಾಗಿತ್ವ ಇಲ್ಲ. ಇಂದಿನಿಂದ ಶಿನಸೇನೆ ಸ್ವತಂತ್ರವಾಗಿದೆ.

ಇನ್ನು ಮುಂದೆ ನಮ್ಮ ಶಿವ ಸೈನಿಕರು ಬಿಎಂಸಿಯಲ್ಲಿ ತಮ್ಮ ತಾಕತ್ತು ತೋರಿಸಲಿದ್ದಾರೆ. ಮೈತ್ರಿಯಿಂದ ಕೂಡಿದ ರಾಜಕೀಯ ಬೇಡ, ನಾನು ಈಗಾಗಲೇ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಕೈ ಸುಟ್ಟಿದ್ದೇನೆ. ಈ ಮೂಲಕ ಬಿಜೆಪಿ ಒಂದೊಳ್ಳೆಯ ಸ್ನೇಹಿತನನ್ನು ಕಳೆದುಕೊಂಡಿದೆ ಎಂದು ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಹೇಳಿದ್ದಾರೆ.

ಶನಿವಾರ ಇಲ್ಲಿನ ಗಿರ್‍ಗಾಂನಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದ ಠಾಕ್ರೆ, ಬಿಜೆಪಿಯಲ್ಲಿ ಮೋದಿಯವರನ್ನು ಬಿಟ್ಟರೆ ಬೇರೆ ಯಾವ ನಾಯಕರೂ ಇಲ್ಲ. ಬಿಎಂಸಿ ಯೋಜನೆಗಳನ್ನೆಲ್ಲಾ ಅನುಷ್ಠಾನಕ್ಕೆ ತಂದಿದ್ದೇ ಸೇನೆ. ಈ ಯೋಜನೆಗಳಲ್ಲಿ ಬಿಜೆಪಿ ಯಾವುದೇ ಪಾತ್ರ ವಹಿಸಿಲ್ಲ ಎಂದಿದ್ದಾರೆ.

ಭಾಷಣದುದ್ದಕ್ಕೂ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಠಾಕ್ರೆ ಬಿಎಂಸಿ ಚುನಾವಣೆ ನಂತರ ಬಿಜೆಪಿ ಜತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

Comments are closed.