ಮನೋರಂಜನೆ

ಅಜಯ್‌ರಾವ್ ನಟನೆಯ ದಂಡಯಾತ್ರೆ ನಿರ್ಮಿಸುತ್ತಿರುವ ಹೊಸ ಮೂವರು ಸಹೋದರರು

Pinterest LinkedIn Tumblr


ಚಿತ್ರರಂಗಕ್ಕೆ ಹೊಸ ಮಂದಿ ಆಗಮಿಸುತ್ತಿದ್ದಾರೆ. ಈ ಬಾರಿ ಧಾರವಾಡದ ಕಲಘಟಗಿಯ ಮೂವರು ಸಹೋದರರು ಚಿತ್ರರಂಗದಲ್ಲಿ ’ದಂಡಯಾತ್ರೆ ಆರಂಭಿಸಿದ್ದಾರೆ. ಅದು ಪಲಪ್ರಧವಾಗಲಿದೆಯೇ ಅಥವಾ ಬಂದ ದಾರಿಗೆ ಸುಂಕವಿಲ್ಲದೆ ಮರಳಿ ಗೂಡು ಸೇರಲಿದ್ದಾರೆಯೇ ಎನ್ನುವುದು ಕಾಲವೇ ನಿರ್ಧರಿಸಲಿದೆ.

ಹರೀಶ್, ಸಂಜೀವ್ ಮತ್ತು ಶ್ರೀಕಾಂತ್ ಸಹೋದರರು “ದಂಡಯಾತ್ರೆ ಚಿತ್ರದ ಮೂಲಕ ನಿರ್ಮಾಪಕರಾಗಿ ಚಿತ್ರರಂಗ ಪ್ರವೇಶಸಿದ್ದಾರೆ. ವೇದ್‌ಗುರು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಅಜಯ್‌ರಾವ್ ನಾಯಕರಾಗಿ ಆಯ್ಕೆಯಾಗಿದ್ದಾರೆ. ನಾಯಕಿಗಾಗಿ ಶೋಧ ಮುಂದುವರಿಸಿದೆ ಚಿತ್ರತಂಡ. ಕಳೆದವಾರ ಚಿತ್ರದ ಮಹೂರ್ತವಿತ್ತು. ಆ ಬಳಿಕ ಚಿತ್ರತಂಡ ಮಾಹಿತಿ ನೀಡಿತು.

ತ್ರಿವಳಿ ನಿರ್ಮಾಪಕರಾದ ಹರೀಶ್ ಸಹೋದರರು, ಸ್ಟಾಕ್ ಎಕ್ಸ್‌ಚೇಂಜ್ ವ್ಯವಹಾರ ನಡೆಸುತ್ತಿದ್ದು ವರ್ಷದಲ್ಲಿ ೧೦ ಸಿನಿಮಾ ನಿರ್ಮಾಣ ಮಾಡುವ ಗುರಿ ಇದೆ. ಈಗಾಗಲೆ ಎರಡು ಮೂರು ಚಿತ್ರ ಕೈಗೆತ್ತಿಕೊಂಡಿದ್ದೇವೆ. ಮೊದಲ ಬಾರಿಗೆ ನಿರ್ಮಾಣಕ್ಕೆ ಕೈ ಹಾಕಿದ್ದೇವೆ. ಚಿತ್ರರಂಗದ ಗಂಧಗಾಳಿ ಗೊತ್ತಿಲ್ಲ.

ಆದರೂ ಒಳ್ಳೆಯ ಚಿತ್ರ ನೀಡುವ ಉದ್ದೇಶ ನಮ್ಮದು, ಚಿತ್ರಕ್ಕೆ ಅಜಯ್ ರಾವ್ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಇನ್ನು ನಾಯಕಿಯ ಹುಡುಕಾಟ ನಡೆದಿದೆ ಎಂದು ಮಾಹಿತಿ ನೀಡಿದರು. ನಿರ್ದೇಶಕ ವೇದ್‌ಗುರು, ಮೊದಲ ನಿರ್ದೇಶನದ ಚಿತ್ರ ಇದು. ದಂಡಯಾತ್ರೆ ಎಂದರೆ ರಾಜ್ಯಗಳನ್ನು ವಶಪಡಿಸಿಕೊಳ್ಳಲು ದಂಡಯಾತ್ರ ಆರಂಭಿಸುತ್ತಾರೆ. ಅದೇ ರೀತಿ ಮರಳಿ ಮರಳಿ ಯತ್ನ ಮಾಡಲು ದಂಡಯಾತ್ರೆ ನಡೆಸುತ್ತಾರೆ. ಐತಿಹಾಸಿಕ ಮತ್ತು ಚಾರಿತ್ರಿಕ ಹಿನ್ನೆಲೆಯಲ್ಲಿ ಚಿತ್ರವನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಜೊತೆಗೆ ಸಮಕಾಲೀನ ಚಿತ್ರಣವನ್ನು ತೋರಿಸು ಪ್ರಯತ್ನ ಚಿತ್ರದ ಮೂಲ ಮಾಡಲಾಗುತ್ತಿದೆ.

ಚಿತ್ರವನ್ನು ಬೆಂಗಳೂರು, ಮೈಸೂರು,ಧಾರವಾಡ ಸೇರಿದಂತೆ ಮತ್ತಿತರ ಕಡೆ ಚಿತ್ರವನ್ನು ಚಿತ್ರೀಕರಿಸುವ ಉದ್ದೇಶವಿದೆ ಎಂದು ಹೇಳಿದರು. ನಟ ಅಜಯ್ ರಾವ್, ಚಿತ್ರ ಜೀವನದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಆಕ್ಷನ್ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ನನ್ನ ಮಟ್ಟಿಗೆ ಭಾರಿ ಬದಲಾವಣೆಯ ಚಿತ್ರ ಎನ್ನುವ ವಿಶ್ವಾಸ ನನ್ನದು ಎಂದು ಹೇಳಿಕೊಂಡರು.

Comments are closed.