
ಶಿವಮೊಗ್ಗ: ‘ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ದಲಿತ ಬಾಲಕನನ್ನು ಬೆತ್ತಲಾಗಿಸಿ ಬಡಿದು ಮಸಣಕ್ಕೆ ಎಸೆದ ಘಟನೆ ಅಮಾನವೀಯ. ಇಂಥ ಘಟನೆಯನ್ನು ನಾಗರಿಕ ಸಮಾಜದ ಯಾರೊಬ್ಬರೂ ಒಪ್ಪಲು ಸಾಧ್ಯವಿಲ್ಲ’ ಎಂದು ಸಾಹಿತಿ ನಾ. ಡಿಸೋಜಾ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಈ ಘಟನೆಯನ್ನು ಸಾಹಿತ್ಯಲೋಕ ಖಂಡಿಸಬೇಕು. ಮನುಷ್ಯ ಜಾತಿ ತಾನೊಂದೆ ವಲಂ ಎನ್ನುವ ಸಾಹಿತ್ಯ ಇಂಥ ಘಟನೆಗಳನ್ನು ಒಪ್ಪಲು ಸಾಧ್ಯವಿಲ್ಲ’ ಎಂದರು.
Comments are closed.