ರಾಷ್ಟ್ರೀಯ

ವಿಧಾನಸಭಾ ಚುನಾವಣೆ: ಪಂಜಾಬ್‌ ಗೆಲುವನ್ನು ರಾಹುಲ್‌ ಗಾಂಧಿಗೆ ಉಡುಗೊರೆ: ನವಜೋತ್‌ ಸಿಂಗ್‌ ಸಿಧು

Pinterest LinkedIn Tumblr
Amritsar:

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಮಾಜಿ ಆಟಗಾರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ನವಜೋತ್‌ ಸಿಂಗ್‌ ಸಿಧು ಪಂಜಾಬ್‌ ವಿಧಾನ ಸಭಾ ಚುನಾವಣೆ ಗೆಲುವನ್ನು ಕಾಂಗ್ರೆಸ್‌ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ‘ಈ ಬಾರಿಯ ವಿಧಾನ ಸಭೆ ಚುನಾವಣೆಯನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‌ ಸ್ಥಾನವನ್ನು ಮರು ಸ್ಥಾಪಿಸಿ ರಾಹುಲ್‌ ಗಾಂಧಿಯವರಿಗೆ ಬಹುದೊಡ್ಡ ಉಡುಗೊರೆಯಾಗಿ ನೀಡಲಿದ್ದೇವೆ’ ಎಂದು ಹೇಳಿದ್ದಾರೆ.

ಪತ್ನಿ ಹಾಗೂ ಮಗನೊಡನೆ ಆಗಮಿಸಿ ತಮ್ಮ ಮತ ಚಲಾಯಿಸಿದ ಸಿಧು ಅವರು, ಪಂಜಾಬ್‌ ಚುನಾವಣೆಯನ್ನು ಧರ್ಮಯುದ್ಧಕ್ಕೆ ಹೋಲಿಸಿ, ‘ಧರ್ಮ ಯುದ್ಧದಲ್ಲಿ ಸತ್ಯಕ್ಕೆ ಜಯ ದೊರೆಯಲಿದ್ದು, ಈ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೇರಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಮ್ಮ ಪೋಷಕರ ಚುನಾವಣಾ ಭವಿಷ್ಯದ ಬಗ್ಗೆ ಮಾತನಾಡಿರುವ ಸಿಧು ಹಾಗು ನವಜೋತ್‌ ಕೌರ್‌ ದಂಪತಿಯ ಪುತ್ರ ಕರಣ್‌ ಸಿಂಗ್‌, ‘ನನ್ನ ತಂದೆ–ತಾಯಿಗಳಿಬ್ಬರೂ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಅವರಿಗಾಗಿ ನಾನು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ್ದೇನೆ’ ಎಂದಿದ್ದಾರೆ.
ಈ ಹಿಂದೆ ಬಿಜೆಪಿಯಲ್ಲಿದ್ದ ನವಜೋತ್‌ ಸಿಂಗ್‌ ಸಿಧು, ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಅಮೃತಸರ ಕ್ಷೇತ್ರದಿಂದ ಮೂರು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಕೆಲ ದಿನಗಳ ಹಿಂದಷ್ಟೆ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ನಾನು ‘ಹುಟ್ಟಾ ಕಾಂಗ್ರೆಸ್ಸಿಗ’ ಎಂದು ಹೇಳಿಕೊಂಡಿದ್ದರು.

Comments are closed.