ರಾಷ್ಟ್ರೀಯ

SCAMನಲ್ಲಿ A ಅಂದ್ರೆ ಅಮಿತ್ ಶಾ, M ಅಂದ್ರೆ ಮೋದಿ: ಅಖಿಲೇಶ್ ಯಾದವ್

Pinterest LinkedIn Tumblr


ಔರಿಯಾ: ಉತ್ತರ ಪ್ರದೇಶದ ಮೀರತ್‍ನಲ್ಲಿ ಚುನಾವಣಾ ಪ್ರಚಾರದ ವೇಳೆ SCAM ಅಂದರೆ ಸಮಾಜವಾದಿ ಪಕ್ಷ, ಕಾಂಗ್ರೆಸ್, ಅಖಿಲೇಶ್ ಯಾದವ್ ಮತ್ತು ಮಾಯಾವತಿ ಎಂದಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಅಖಿಲೇಶ್ ಯಾದವ್ SCAMನಲ್ಲಿ A ಅಂದ್ರೆ ಅಮಿತ್ ಶಾ, M ಅಂದ್ರೆ ಮೋದಿ ಎಂದು ಹೇಳಿದ್ದಾರೆ.

ಔರಿಯಾದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಖಿಲೇಶ್ ಈ ದೇಶವನ್ನು ಅಮಿತ್ ಶಾ ಮತ್ತು ಮೋದಿಯವರಿಂದ ಕಾಪಾಡಿ ಎಂದಿದ್ದಾರೆ.

ಮೋದಿಯವರು ರಾಜಕೀಯ ತಂತ್ರ ಮಾಡದೇ ಇರುತ್ತಿದ್ದರೆ ಅವರು ಪ್ರಧಾನಿಯೂ ಆಗುತ್ತಿರಲಿಲ್ಲ ಎಂದು ಹೇಳಿದ ಅಖಿಲೇಶ್, ರಾಜ್ಯದ ಅಭಿವೃದ್ಧಿಗೆ ನಮ್ಮ ಸರ್ಕಾರವೇ ತಡೆಯಾಗಿ ನಿಂತಿರುತ್ತಿದ್ದರೆ ಇಲ್ಲಿ ರಾಜ್ಯ ಇಷ್ಟೊಂದು ಅಭಿವೃದ್ಧಿ ಹೊಂದುತ್ತಿರಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಉತ್ತರ ಪ್ರದೇಶ ಮೀರತ್‌ನಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ನಾವು ಈ ಚುನಾವಣೆಯಲ್ಲಿ SCAMವಿರುದ್ಧ ಹೋರಾಟ ನಡೆಸುತ್ತಿದ್ದೇವೆ. SCAM ಎಂದರೆ ಸಮಾಜವಾದಿ(S) ಕಾಂಗ್ರೆಸ್‌(C), ಅಖಿಲೇಶ್‌ (A), ಮಾಯಾವತಿ(M)’ ಎಂದು ಹೇಳಿದ್ದರು.

Comments are closed.