ಮನೋರಂಜನೆ

ಪಾಕ್ ನಲ್ಲಿ ಇಂದಿನಿಂದ ಬಾಲಿವುಡ್ ಚಿತ್ರ ಕಾಬಿಲ್‌ ಬಿಡುಗಡೆಗೆ ಅಸ್ತು

Pinterest LinkedIn Tumblr


ನವದೆಹಲಿ: ಬಾಲಿವುಡ್‌ ಚಿತ್ರಗಳ ಮೇಲೆ ಹೇರಿದ್ದ ನಿಷೇಧವನ್ನು ಹಿಂಪಡೆದಿರುವ ಪಾಕಿಸ್ತಾನ ಹೃತಿಕ್‌ ರೋಶನ್‌ ಅಭಿನಯದ ‘ಕಾಬಿಲ್‌’ ಚಿತ್ರ ಬಿಡುಗಡೆಗೆ ಅಸ್ತು ಎಂದಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಹೃತಿಕ್‌ ರೋಶನ್‌ ಅವರ ತಂದೆ ರಾಕೇಶ್‌ ರೋಶನ್‌ ಇಂದಿನಿಂದ ಕಾಬಿಲ್‌ ಚಿತ್ರ ಪ್ರದರ್ಶನ ಪಾಕಿಸ್ತಾನದ ಕರಾಚಿಯಲ್ಲಿ ಬೆಳಿಗ್ಗೆ 11 ಗಂಟೆಯಿಂದ ಪ್ರದರ್ಶನ ಕಾಣಲಿದೆ. ಭಾರತೀಯ ಚಿತ್ರಗಳ ವೀಕ್ಷಣೆಗೆ ಹಾತೊರೆಯುತ್ತಿರುವ ಪಾಕಿಸ್ತಾನಿ ಚಿತ್ರ ರಸಿಕರಿಗೆ ಮನರಂಜನೆ ಒದಗಿಸಲಿದೆ ಎಂದಿದ್ದಾರೆ.

ಬುಧವಾರ ರಾತ್ರಿ ಟ್ವೀಟ್‌ ಮಾಡಿ ಈ ಕುರಿತು ರೋಶನ್‌ ಪರಿವಾರ ದೃಢಿಕರಿಸಿದೆ. ಬಾಲಿವುಡ್‌ ಚಿತ್ರಗಳ ಬಿಡುಗಡೆಗೆ ಪಾಕಿಸ್ತಾನದಲ್ಲಿ ಅನುಮತಿ ನೀಡಲು ಸಮಿತಿಯೊಂದನ್ನು ರಚಿಸಿ, ಚಿತ್ರ ವಿತರಕರು ಮತ್ತು ಮಧ್ಯಸ್ಥಿಕೆದಾರರ ಅಭಿಪ್ರಾಯ ಸಂಗ್ರಹಿಸಿ ಪ್ರಧಾನಿ ನವಾಜ್‌ ಷರೀಫ್ ಅವರಿಗೆ ವರದಿ ಸಲ್ಲಿಸಿತ್ತು. ಇದಕ್ಕೆ ಷರೀಫ್‌ ಅನುಮತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪಾಕ್‌ನ ಕೆಲ ಆಯ್ದ ಸ್ಥಳಗಳಲ್ಲಿ ಮಾತ್ರ ಚಿತ್ರ ಪ್ರದರ್ಶನಕ್ಕೆ ಅನುಮತಿ ನೀಡಲಾಗಿದೆ ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸರಣ ಸಚಿವಾಲಯ ತಿಳಿಸಿದೆ.

ಕಳೆದ ವರ್ಷ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ನಡೆಸಿದ್ದ ಸರ್ಜಿಕಲ್‌ ದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನ ಭಾರತೀಯ ಚಿತ್ರಗಳ ಪ್ರದರ್ಶನಕ್ಕೆ ನಿರ್ಬಂಧ ಹೇರಿತ್ತು.

Comments are closed.