ರಾಷ್ಟ್ರೀಯ

ಪಂಜಾಬ್ ವಿಧಾನಸಭಾ ಚುನಾವಣೆ: ಮತದಾರರ ಓಲೈಕೆಗಾಗಿ ಮನೆ ಬಾಗಿಲಿಗೆ ‘ಮಾದಕ ವಸ್ತು’!

Pinterest LinkedIn Tumblr


ಗುರುದಾಸ್‍ಪುರ್: ಓಪಿಯಂ ಮಾದಕ ವಸ್ತು ವ್ಯಸನಿಯಾಗಿರುವ ರಾಜೇಂದರ್ ಎಂಬಾತನಿಗೆ ಈಗ ಖುಷಿಯೋ ಖುಷಿ, ಇಲ್ಲಿಯವರೆಗೆ ಸಾಲ ಮಾಡಿ ಅಥವಾ ಕದ್ದು ಮಾದಕ ವಸ್ತು ಗಿಟ್ಟಿಸಿಕೊಂಡಿದ್ದ ಈತನ ಮನೆ ಬಾಗಿಲಿಗೇ ಈಗ ಮಾದಕ ವಸ್ತು ತಂದುಕೊಡುತ್ತಾರೆ. ಚುನಾವಣೆ ಬಂತೆಂದರೆ ನನಗೆ ತುಂಬಾ ಖುಷಿ. ಹೀಗೆ ಪ್ರತೀ ತಿಂಗಳು ಚುನಾವಣೆ ಇರಬೇಕಿತ್ತು ಅಂತಾನೆ ಈತ.

ಇದು ವಿಧಾನಸಭಾ ಚುನಾವಣೆಗೆ ಸಿದ್ಧವಾಗುತ್ತಿರುವ ಪಂಜಾಬ್‍ನಲ್ಲಿ ಮತದಾರರ ಓಲೈಕೆಗಾಗಿ ರಾಜಕಾರಣಿಗಳು ಹೂಡಿರುವ ಹೊಸ ತಂತ್ರ!
ಇತರ ರಾಜ್ಯಗಳಲ್ಲಿ ರಾಜಕಾರಣಿಗಳು ಮದ್ಯ, ಹಣ, ಗೃಹೋಪಕರಣಗಳನ್ನು ನೀಡಿ ಮತದಾರರನ್ನು ಓಲೈಸುತ್ತಿದ್ದರೆ, ಪಂಜಾಬ್‍‌ನಲ್ಲಿ ಮಾದಕ ವಸ್ತುಗಳನ್ನು ನೀಡಿ ಓಲೈಸಲಾಗುತ್ತಿದೆ ಎಂದು ಇಲ್ಲಿನ ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.

ಇಲ್ಲಿ ಚುನಾವಣಾ ದಿನಾಂಕ ಘೋಷಣೆ ಆದ ನಂತರ ಹೆರಾಯಿನ್ ಮತ್ತು ಓಪಿಯಂ ಸೇರಿದಂತೆ 2.63 ಟನ್‍ಗಳಿಗಿಂತಲೂ ಹೆಚ್ಚು ಮಾದಕ ವಸ್ತುಗಳನ್ನು ವಶ ಪಡಿಸಿಕೊಳ್ಳಲಾಗಿದೆ.

2012ರಲ್ಲಿ ನಡೆದ ಚುನಾವಣೆ ವೇಳೆಯಲ್ಲಿ ಮಾದಕ ವಸ್ತುಗಳನ್ನು ನೀಡಿ ಓಲೈಕೆ ಮಾಡುವ ಬಗ್ಗೆ ನಮ್ಮ ಗಮನಕ್ಕೆ ಬಂದಿತ್ತು, ಇಲ್ಲಿ ಮಾದಕ ವಸ್ತು ಮಾರಾಟ ಜಾಲ ಜಾಸ್ತಿ ಇದೆ. ಕಳೆದ ಒಂದು ತಿಂಗಳಲ್ಲಿ ನಾವು 55 ಕೆಜಿ ಹೆರಾಯಿನ್, ಅಂದಾಜು 430 ಕೆಜಿ ಓಪಿಯಂ ವಶ ಪಡಿಸಿಕೊಂಡಿದ್ದೇವೆ ಎಂದು ಚುನಾವಣಾ ಆಯೋಗದ ಮಾಜಿ ಕಮಿಷನರ್ ಎಸ್. ವೈ. ಖುರೇಷಿ ಹೇಳಿದ್ದಾರೆ.

Comments are closed.