ಮನೋರಂಜನೆ

ಪ್ರಿಯಾಂಕಾ ಚೋಪ್ರಾ ಪ್ರಿಯಕರ ಇವನೇನಾ?

Pinterest LinkedIn Tumblr


ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಸದ್ಯಕ್ಕೆ ಹಾಲಿವುಡ್‌ನ ಕ್ವಾಂಟಿಕೋ, ಬೇವಾಚ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಆಗಾಗ ಪ್ರಚಾರಕ್ಕಾಗಿ ತನ್ನ ಸಹನಟ ಡ್ವೆಯನ್ ಜಾನ್ಸನ್ ಜತೆ ತೆಗೆಸಿಕೊಂಡಿರುವ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇಲ್ಲಿಯವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಪ್ರಿಯಾಂಕಾ ಜತೆ ಅಭಿನಯಿಸಿರುವ ಮತ್ತೊಬ್ಬ ನಟ ಜಾಕ್ ಎಫ್ರಾನ್ ಜತೆಗಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ. ಈ ಫೋಟೋಗಳನ್ನು ನೋಡಿದವರು ಪ್ರಿಯಾಂಕಾ ಪ್ರಿಯಕರ ಇವರೇನಾ ಎಂಬಂತಿವೆ.

ಜಾಕ್ ಮತ್ತು ಪಿಸಿ ಕಣ್ಣಿಗೆ ಸ್ಲೀಪಿಂಗ್ ಮಾಸ್ಕ್ ಹಾಕಿಕೊಂಡು ಒಬ್ಬರ ಭುಜದ ಮೇಲೆ ಮತ್ತೊಬ್ಬರು ನಿದ್ರಿಸುತ್ತಿರುವ ಫೋಟೋವೊಂದನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ ಪ್ರಿಯಾಂಕಾ. ಸಿನಿಮಾ ಪ್ರಚಾರಕ್ಕಾಗಿ ಈ ಫೋಟೋಗಳನ್ನು ಹಾಕುತ್ತಿದ್ದಾರಾ ಅಥವಾ ಇವನೇ ತನ್ನ ಪ್ರಿಯಕರ ಎಂಬುದನ್ನು ತಿಳಿಸಲು ಪ್ರಯತ್ನಿಸುತ್ತಿದ್ದಾರಾ? ಎಂಬ ಸುದ್ದಿ ಹರಿದಾಡುತ್ತಿದೆ.

Comments are closed.