ಕರ್ನಾಟಕ

ಎಸ್.ಎಂ.ಕೃಷ್ಣ ಮನವೊಲಿಕೆಗೆ ಮುಂದಾದ ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು,ಫೆ,೧-ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರು ಕಾಂಗ್ರೆಸ್ ತ್ಯಜಿಸಿರುವುದರಿಂದ ಪಕ್ಷದಲ್ಲಿ ಉಂಟಾಗುತ್ತಿರುವ ತಳಮಳವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೃಷ್ಣ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲು ಮುಂದಾಗಿದ್ದಾರೆ.
ಪಕ್ಷ ತ್ಯಜಿಸುವ ತೀರ್ಮಾನ ಕೈಗೊಂಡ ನಂತರ ಕೃಷ್ಣ ಅವರನ್ನು ನಾನು ಭೇಟಿ ಮಾಡಿಲ್ಲ ಶೀಘ್ರವೇ ಅವರ ಬಳಿ ಹೋಗಿ ಮಾತನಾಡಿ ಪಕ್ದಲ್ಲಿ ಉಳಿಸಿಕೊಳ್ಳಲು ಮನವೊಲಿಕೆ ನಡೆಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಅವರು ವಿಮಾನನಿಲ್ದಾಣದ ಬಳಿ ಸುದ್ದಿಗಾರೊಂದಿಗೆ ಮಾತನಾಡಿ ಕಾಂಗ್ರೆಸ್ ಎಲ್ಲ ವರ್ಗ, ಎಲ್ಲಾ ವಯೋಮಾನದವರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪಕ್ಷವಾಗಿದೆ ನಾನು ಕೃಷ್ಣ ಅವರ ಜೊತೆ ಮಾತನಾಡಿ ಪಕ್ಷದಲ್ಲಿಯೇ ಉಳಿಸಿಕೊಳ್ಳುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಲೆಕ್ಕಚಾರ ತಪ್ಪುತ್ತದೆ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಯಾವ ಅಭಿಪ್ರಯಾದಲ್ಲಿ ಖರ್ಗೆ ಈ ಹೇಳಿಕೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ. ಪಕ್ಷದಲ್ಲಿ ಯಾರನ್ನ ಯಾರೂ ನಿರ್ಲಕ್ಷ್ಯ ಮಾಡಲಿಲ್ಲ.ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯನೇ ಅಲ್ಲ ಅಂತ ಹೇಳಲ್ಲ. ಎಲ್ಲರೂ ಪಕ್ಷಕ್ಕೆ ಬೇಕು ಎಂದರು.
ರಾಜ್ಯ ಬಜೆಟ್ ಮಾರ್ಚ್ ತಿಂಗಳಲ್ಲಿ ಮಂಡನೆ ಮಾಡಲಾಗವುದು ಇನ್ನೂ ಬಜೆಟ್ ಮಂಡನೆಗೆ ದಿನಾಂಕ ನಿಗದಿಯಾಗಿಲ್ಲ. ಬಹುಶಃ ಎರಡನೇ ವಾರದಲ್ಲಿ ಮಾಡಬಹುದು ಎಂದು ಹೇಳಿದರು.
ಜನರು ಗುಳೆ ಹೋಗದಂತೆ ಕ್ರಮ ಕೈಗೊಳ್ಳಲು ಸೂಚನೆನೀಡಲಾಗಿದ್ದು, ಅಧಿಕಾರಿಗಳು ಹೆಚ್ಚು ಕೆಲಸ ಮಾಡಬೇಕೆಂದು ಹೇಳಿದ್ದೇವೆ. ಯಾವುದೇ ವಿಳಂಬವಾಗದ ರೀತಿ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಫಲಾನುಭವಿಗಳಿಗೆ ಅನುದಾನ ಸರಿಯಾಗಿ ಸಿಗಬೇಕು. ಕುಡಿಯುವ ನೀರು, ಬರಗಾಲ, ಉದ್ಯೋಗಕ್ಕೆ ಆಧ್ಯತೆ ನೀಡಬೇಕು ಎಂಬ ಉದ್ದೇಶವನ್ನ ಹೊಂದಿದ್ದು, ಬರಪರಿಹಾರಕ್ಕಾಗಿ ಕೇಂದ್ರಕ್ಕೆ ಅಕ್ಟೋಬರ್ ೨೭ ರಂದು ಮನವಿ ನೀಡಿದ್ದೆ. ಆದರೆ ಈವರೆಗೆ ಅನುದಾನ ನೀಡಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.ಈ ವೇಳೆ ಸಚಿವ ಆಂಜನೇಯ, ಡಾ.ಎಚ್.ಸಿ.ಮಹದೇವಪ್ಪ ಉಪಸ್ಥಿತರಿದ್ದರು.

Comments are closed.