ಮನೋರಂಜನೆ

ಗ್ಯಾಂಗ್‌ಸ್ಟರ್‌ನಿಂದ ಸಲ್ಮಾನ್ ವಕೀಲನಿಗೆ ಜೀವ ಬೆದರಿಕೆ

Pinterest LinkedIn Tumblr


ಜೋಧಪುರ್: ಬಾಲಿವುಡ್ ನಟ ಸಲ್ಮಾನ್ ಖಾನ್ ಪರ ವಕೀಲನಿಗೆ ಅಂತಾರಾಷ್ಟ್ರೀಯ ಗ್ಯಾಂಗ್‌ಸ್ಟರ್‌ ಒಬ್ಬ ಕರೆ ಮಾಡಿ ಜೀವ ಬೆದರಿಕೆಯೊಡ್ಡಿದ್ದಾನೆ.
ಶಸ್ತ್ರಾಸ್ತ್ರ ಹಾಗೂ ಕೃಷ್ಣಮೃಗ ಬೇಟೆ ಪ್ರಕರಣ ಸಂಬಂಧ ಜೋಧಪುರ ಸೆಷನ್ಸ್ ನ್ಯಾಯಾಲಯ ಸಲ್ಮಾನ್ ಖಾನ್ ರನ್ನು ಖುಲಾಸೆಗೊಳಿಸಿತ್ತು. ಈ ಸಂಬಂಧ ವಾದಿಸಿದ್ದ ಸಲ್ಮಾನ್ ಪರ ವಕೀಲ ಹೆಚ್ ಎಂ ಸರಸ್ವತ್ ಗೆ ಗ್ಯಾಂಗ್ ಸ್ಟರ್ ಪ್ರಾಣ ಬೆದರಿಕೆಯೊಡ್ಡಿದ್ದಾನೆ.
ಸರಸ್ವತ್ ಗೆ ಕರೆ ಮಾಡಿದ ಗ್ಯಾಂಗ್ ಸ್ಟರ್ ಮುಂದಿನ ಪರಿಣಾಮಗಳನ್ನು ಎದುರಿಸಲು ಧೈರ್ಯವಾಗಿರಿ. ನಿನ್ನನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬೆದರಿಕೆಯೊಡ್ಡಿದ್ದಾನೆ ಎಂದು ಸರಸ್ವತ್ ಹೇಳಿದ್ದಾರೆ. ಈ ಸಂಬಂಧ ದೂರು ಸಹ ದಾಖಲಿಸಿದ್ದಾರೆ.
ಈ ಸಂಬಂಧ ಸರಸ್ವತ್ ಗೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತ ಅಶೋಕ್ ರಾಥೋರ್ ಹೇಳಿದ್ದಾರೆ.

Comments are closed.