ರಾಷ್ಟ್ರೀಯ

ರಜೆ ದಿನ ಮಲ್ಯಗೆ ಸಾಲ ನೀಡಿದ್ದ ಐಡಿಬಿಐ ಸಿಎಂಡಿ..!

Pinterest LinkedIn Tumblr


ನವದೆಹಲಿ(ಜ.29): ‘ಮದ್ಯದ ದೊರೆ’ ವಿಜಯ್ ಮಲ್ಯ ಸಾಲದ ಸುಳಿಗೆ ಸಿಲುಕಿದ್ದರೂ ಅವರ ಒಡೆತನದ ಕಿಂಗ್‌ಫಿಷರ್ ಏರ್‌’ಲೈನ್ಸ್‌ಗೆ ಐಡಿಬಿಐ ಬ್ಯಾಂಕ್ ಆತುರಾತುರವಾಗಿ ಸಾಲ ಮಂಜೂರು ಮಾಡಿತ್ತು. ಇದರ ಹಿಂದೆ ಕ್ರಿಮಿನಲ್ ಸಂಚು ಇದೆ ಎಂಬ ಅಂಶವನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪತ್ತೆ ಹಚ್ಚಿದೆ.
ಐಡಿಬಿಐ ಬ್ಯಾಂಕ್ ಕಿಂಗ್‌ಫಿಷರ್ ಸಂಸ್ಥೆಗೆ 860.92 ಕೋಟಿ ರೂ. ಸಾಲ ನೀಡಿತ್ತು. ಆ ಪೈಕಿ ಮೊದಲ ಎರಡು ಕಂತುಗಳಲ್ಲಿ 350 ಕೋಟಿ ರೂ. ಮಂಜೂರಾಗಿತ್ತು. ಆ ಸಾಲ ನೀಡುವುದಕ್ಕೂ ಮುನ್ನ ಐಡಿಬಿಐ ಬ್ಯಾಂಕಿನ ಸಿಎಂಡಿ ಯೋಗೇಶ್ ಅಗರ್‌’ವಾಲ್ ಅವರು ಮಲ್ಯ ಅವರನ್ನು ಬ್ಯಾಂಕಿಗೆ ರಜೆ ಇದ್ದರೂ ಭೇಟಿ ಮಾಡಿದ್ದರು ಎಂಬ ಅಂಶ ಜಾರಿ ನಿರ್ದೇಶನಾಲಯದ ತನಿಖಾ ವರದಿಯಲ್ಲಿದೆ. ಇದರ ಪ್ರತಿ ತನಗೆ ಲಭಿಸಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬ್ಯಾಂಕಿನಿಂದ ಸಾಲ ಪಡೆಯಲು ಮಲ್ಯ ಅವರು ಕೆಲವೊಂದು ಖಾತ್ರಿಗಳನ್ನು ನೀಡಿದ್ದರು. ಆದರೆ, ಅದರ ಮೌಲ್ಯವನ್ನು ಬ್ಯಾಂಕು ಪರಿಶೀಲಿಸಿರಲೇ ಇಲ್ಲ. ಮುನ್ನೆಚ್ಚರಿಕೆ ವಹಿಸುವಲ್ಲಿ ಬ್ಯಾಂಕು ವಿಫಲವಾಗಿತ್ತು. ಮಲ್ಯ ಹಾಗೂ ಕಿಂಗ್‌’ಫಿಷರ್ ಏರ್‌ಲೈನ್ಸ್‌ಗೆ ಸಾಲ ಮರುಪಾವತಿ ಉದ್ದೇಶವೇ ಇರಲಿಲ್ಲ ಎಂದು ವರದಿ ತಿಳಿಸಿದೆ. ಇತ್ತೀಚೆಗಷ್ಟೇ ಅಗರ್‌’ವಾಲ್ ಹಾಗೂ ಇತರ ಎಂಟು ಮಂದಿಯನ್ನು ಸಿಬಿಐ ಬಂಧಿಸಿತ್ತು.

Comments are closed.