ರಾಷ್ಟ್ರೀಯ

ದಿಲ್ಲಿ ವಿವಿಯಿಂದ ವಿದ್ಯಾರ್ಥಿಗಳ ಹಾಜರಾತಿಗೆ ಮೊಬೈ ಆಪ್

Pinterest LinkedIn Tumblr


ನವದೆಹಲಿ: ವಿದ್ಯಾರ್ಥಿಗಳ ಹಾಜರಾತಿಯ ಮೇಲೆ ನಿಗಾ ಇಡಲು ದೆಹಲಿ ವಿಶ್ವವಿದ್ಯಾನಿಲಯ ಮೊಬೈಲ್ ಆಪ್ ನ್ನು ಅಭಿವೃದ್ಧಿಗೊಳಿಸಲು ಮುಂದಾಗಿದೆ.
ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ವರ್ಷ ದೆಹಲಿ ವಿಶ್ವವಿದ್ಯಾನಿಲಯ 7 ಸದಸ್ಯರ ಸಮಿತಿಯನ್ನು ರಚಿಸಿ ಮೊಬೈಲ್ ಆಪ್ ತಯಾರಿಕೆ ಬಗ್ಗೆ ಸಲಹೆ-ಸೂಚನೆ ನೀಡುವಂತೆ ಕೇಳಿತ್ತು. ಕಳೆದ 6 ತಿಂಗಳಿನಿಂದ ಈ ಪ್ರಸ್ತಾವನೆಯನ್ನು ಪರಿಗಣಿಸಲಾಗಿತ್ತು. ಅಂತಿಮವಾಗಿ ಮುಂದಿನ ತಿಂಗಳಲ್ಲಿ ಮೊಬೈಲ್ ಆಪ್ ಬಿಡುಗಡೆಯಾಗಲಿದೆ.
ಮೊಬೈಲ್ ಆಪ್ ನೆರವಿನಿಂದ ಶಿಕ್ಷಕರು ಪ್ರತಿದಿನ ತರಗತಿಗೆ ಹಾರಜಗುವ ವಿದ್ಯಾರ್ಥಿಗಳ ಸಂಖ್ಯೆ ಹಾಗೂ ಹಾಜರಾತಿ ಕಡಿಮೆ ಇರುವ ಬಗ್ಗೆ ವಿದ್ಯಾರ್ಥಿಗಳಿಗೆ ಶಿಕ್ಷಕರು ಮೊದಲೇ ಮಾಹಿತಿ ನೀಡಬಹುದಾಗಿದೆ ಎಂದು ದೆಹಲಿ ವಿವಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಿಕ್ಷಕರು ಸರಿಯಾದ ಹಾಜರಾತಿ ದಾಖಲೆಗಳನ್ನು ನಿರ್ವಹಿಸಿಲ್ಲ ಎಂದು ಸಾಮಾನ್ಯವಾಗಿ ವಿದ್ಯಾರ್ಥಿಗಳು ದೂರುತ್ತಾರೆ. ಆದರೆ ಮೊಬೈಲ್ ಆಪ್ ನಿಂದ ಇನ್ನು ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಇರುವುದಿಲ್ಲ ಎಂದು ದೆಹಲಿ ವಿವಿ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.