ಮನೋರಂಜನೆ

ಕುಂಗ್‌ ಫು ಯೋಗ’ ಚಿತ್ರ ಪ್ರಚಾರಕ್ಕಾಗಿ ಜಾಕಿಚಾನ್‌, ಸಲ್ಮಾನ್‌ ಖಾನ್‌ ಭೇಟಿ

Pinterest LinkedIn Tumblr

ಮುಂಬೈ: ಹಾಲಿವುಡ್‌ ನಟ ಜಾಕಿಚಾನ್‌ ತಮ್ಮ ಮುಂಬರುವ ಚಿತ್ರ ‘ಕುಂಗ್‌ ಫು ಯೋಗ’ ಚಿತ್ರ ಪ್ರಚಾರಕ್ಕಾಗಿ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ರನ್ನು ಭೇಟಿ ಮಾಡಿದ್ದಾರೆ.

ಚಿತ್ರ ಪ್ರಚಾರಕ್ಕೆ ಮುಂಬೈಗೆ ಆಗಮಿಸಿದ್ದ ಜಾಕಿಚಾನ್‌, ಪ್ರಚಾರಕ್ಕಾಗಿ ಸಲ್ಮಾನ್‌ ಖಾನ್‌ರನ್ನು ಆಹ್ವಾನಿಸಿದ್ದಾರೆ. ಸಲ್ಮಾನ್‌ ಖಾನ್‌ ಟ್ವಿಟರ್‌ ಖಾತೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಚಿತ್ರಗಳಲ್ಲಿ ಪಾಂಡಾ ಆಟಿಕೆಗಳನ್ನು ಇಬ್ಬರು ನಟರು ಕೈಯಲ್ಲಿ ಹಿಡಿದಿದ್ದಾರೆ. ಅದರ ಮೇಲೆ ‘ಯುನಿಸೆಫ್‌: ಪ್ರತಿ ಮಕ್ಕಳಿಗಾಗಿ’ ಎಂಬ ಬರಹ ಹೊಂದಿದೆ.

62 ರ ಹರೆಯದ ಜಾಕಿಚಾನ್‌ ಸಮರ ಕಲೆಗಳಲ್ಲಿ ನಿಸ್ಸೀಮ ಹಾಗೂ ವಿಶ್ವಸಂಸ್ಥೆ ಮಕ್ಕಳ ನಿಧಿ (ಯುನಿಸೆಫ್‌) ಪ್ರಚಾರ ರಾಯಭಾರಿಯೂ ಆಗಿದ್ದಾರೆ. ಕುಂಗ್‌ ಫು ಯೋಗ ಚಿತ್ರದಲ್ಲಿ ಬಾಲಿವುಡ್‌ ಖಳನಟ ಸೋನು ಸೂದ್‌ ನಟಿಸಿದ್ದಾರೆ. ಚಿತ್ರವು ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ.

Comments are closed.