ಮನೋರಂಜನೆ

ದಂಗಲ್ ನಲ್ಲಿ ಅಮೀರ್ ಖಾನ್ ನಟಿಸದಿದ್ದರೆ ಈ ಪಾತ್ರ ಯಾರ ಪಾಲಾಗುತ್ತಿತ್ತು?

Pinterest LinkedIn Tumblr


ಮುಂಬೈ (ಜ.18): ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅಭಿನಯದ ದಂಗಾಲ್‌ ಸಿನಿಮಾ ಅತ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ಈ ಸಿನಿಮಾದ ನಟನೆಗಾಗಿ ಅಮೀರ್‌ ಉತ್ತಮ ನಟ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.
ಇಂಟರೆಸ್ಟಿಂಗ್ ವಿಚಾರ ಅಂದರೆ ಅಮೀರ್‌ ಈ ಕಥೆಯನ್ನು ಓಕೆ ಮಾಡದಿದ್ದಲ್ಲಿ ಈ ಪಾತ್ರವನ್ನ ಇಬ್ಬರು ಸ್ಟಾರ್ ನಟರ ಪಾಲಾಗುತ್ತಿತ್ತು, ಅಂತ ಯುಟಿವಿ ಮೋಶನ್‌ನ ಕ್ರಿಯೆಟಿವ್‌ ಪ್ರೊಡ್ಯೂಸರ್‌ ದಿವ್ಯಾ ರಾವ್‌ ಸಂದರ್ಶನವೊಂದರಲ್ಲಿ ಈ ವಿಷಯವನ್ನು ಬಿಚ್ಚಿಟ್ಟಿದ್ದಾರೆ.
ಅಮೀರ್‌ ಈ ಪಾತ್ರಕ್ಕೆ ಒಪ್ಪಿಕೊಳ್ಳದಿದ್ದಲ್ಲಿ, ಕಮಲ್‌ ಹಾಸನ್‌ ಅಥವಾ ಮೋಹನ್‌ಲಾಲ್‌ರನ್ನು ಅಪ್ರೋಚ್‌ ಮಾಡುತ್ತಿದ್ದೆವು ಎಂದಿದ್ದಾರೆ. ಅಮೀರ್‌ನ್ನು ಬಿಟ್ಟು ಈ ಪಾತ್ರಕ್ಕೆ ಸೂಟ್‌ ಆಗುತ್ತಿದ್ದ ನಟರೆಂದರೆ ಅದು ಕಮಲ್‌ ಹಾಗೂ ಮೋಹನ್‌ಲಾಲ್‌ ಅಂತಾ ದಿವ್ಯಾ ಹೇಳಿದ್ದಾರೆ.

Comments are closed.