ಮನೋರಂಜನೆ

ಪ್ರಿಯಾಂಕಾ ಚೋಪ್ರಾಗೆ 2ನೇ ಬಾರಿಗೆ ‘ಪೀಪಲ್ಸ್‌ ಚಾಯ್ಸ್‌’ ಪ್ರಶಸ್ತಿ

Pinterest LinkedIn Tumblr


ಲಾಸ್‌ ಏಂಜಲ್ಸ್‌: ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಅವರು ‘ಕ್ವಾಟಿಂಕೋ’ ಕಾರ್ಯಕ್ರಮದಲ್ಲಿ ನಿರ್ವಹಿಸಿದ್ದ ‘ಅಲೆಕ್ಸ್‌ ಫ್ಯಾರಿಶ್‌’ ಪಾತ್ರಕ್ಕೆ ಹೆಚ್ಚು ಜನ ಮನ್ನಣೆ ದೊರೆತಿದ್ದು, ‘2017ರ ಪೀಪಲ್ಸ್‌ ಚಾಯ್ಸ್‌’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

34 ವರ್ಷದ ನಟಿ ಪ್ರಿಯಾಂಕಾ ಚೋಪ್ರಾ ಸತತ ಎರಡನೇ ಬಾರಿಗೆ ‘ಪೀಪಲ್ಸ್‌ ಚಾಯ್ಸ್‌’ ಪ್ರಶಸ್ತಿಯನ್ನು ಗಳಿಸುವ ಮೂಲಕ ವೀಕ್ಷಕರ ನೆಚ್ಚಿನ ನಾಟಕೀಯ ಟಿವಿ ತಾರೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

43ನೇ ಪೀಪಲ್ಸ್‌ ಚಾಯ್ಸ್‌ ಪ್ರಶಸ್ತಿ ಸಮಾರಂಭ ಕ್ಯಾಲಿಫೋರ್ನಿಯಾದ ಲಾಸ್‌ ಏಂಜಲಿಸ್‌ನಲ್ಲಿ ಬುಧವಾರ ನಡೆಯಿತ್ತು. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕಾ, ‘ಈ ಸಾಧನೆಗೆ ತನ್ನೊಂದಿಗೆ ಕಾರ್ಯ ನಿರ್ವಹಿಸಿದ ಎಲ್ಲ ಸಹ ಕಲಾವಿದರು ಕಾರಣರಾಗಿದ್ದಾರೆ ಎಂದಿದ್ದು, ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

Comments are closed.