ರಾಷ್ಟ್ರೀಯ

ಕಾಶ್ಮೀರಿ ಪಂಡಿತರು ಮರಳಲು ಸೂಕ್ತ ವಾತಾವರಣಕ್ಕೆ ಜಮ್ಮು–ಕಾಶ್ಮೀರ ವಿಧಾನಸಭೆ ನಿರ್ಣಯ

Pinterest LinkedIn Tumblr


ಜಮ್ಮು: ಕಣಿವೆಗಳ ನಾಡಿನಿಂದ ನಿರ್ಗಮಿಸಿರುವ ಕಾಶ್ಮೀರಿ ಪಂಡಿತರ ಮತ್ತು ಇತರೆ ವಲಸಿಗರು ಮರಳಿ ಬರಲು ಅನುಕೂಲಕರ ವಾರಾವರಣ ಸೃಷ್ಟಿಗೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಸರ್ವಾನುಮತದ ನಿರ್ಣಯ ಕೈಗೊಂಡಿದೆ.

27 ವರ್ಷಗಳ ಹಿಂದೆ ಸೃಷ್ಟಿಯಾದ ದುರದೃಷ್ಟಕರ ಸನ್ನಿವೇಶದಲ್ಲಿ ಕಾಶ್ಮೀರಿ ಪಂಡಿತರು, ಸಿಖ್ಖರು ಹಾಗೂ ಮುಸ್ಲಿಂ ಸಮುದಾಯದ ಅನೇಕರು ತಮ್ಮ ನೆಲವನ್ನು ತೊರೆಯಬೇಕಾಯಿತು.

ಇಲ್ಲಿಂದ ದೂರ ಹೊರಟು ಇಂದಿಗೆ 27 ವರ್ಷಗಳೇ ಕಳೆದಿರುವ ಸಂದರ್ಭದಲ್ಲಿ ಪಕ್ಷ ರಾಜಕಾರಣವನ್ನು ಮರೆತು ಸರ್ವ ಪಕ್ಷಗಳು ಕಾಶ್ಮೀರಿ ಪಂಡಿತರು ಮತ್ತು ಗುಳೆ ಹೊರಟ ಇತರರು ಮರಳಲು ಅನುವಾಗುವ ನಿರ್ಣಯ ಕೈಗೊಳ್ಳಬೇಕೆಂದು ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ವಿಧಾನಸಭೆಯಲ್ಲಿ ಒತ್ತಾಯಿಸಿದರು.

ಸ್ಪೀಕರ್‌ ಕವೀಂದರ್‌ ಗುಪ್ತ ಮಂಡಿಸಿದ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು.

Comments are closed.