ಮನೋರಂಜನೆ

‘ತಿಥಿ’ ನಟರ ‘ಯೇನ್ ನಿನ್ ಪ್ರಾಬ್ಲಮ್ಮು’ ಈ ವಾರ ಬಿಡುಗಡೆ

Pinterest LinkedIn Tumblr


ಬೆಂಗಳೂರು: ಬಹುಷಃ ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ೯೮ ವರ್ಷದ ಸಿಂಗ್ರಿ ಗೌಡ ಮತ್ತು ೮೦ ವರ್ಷದ ಚನ್ನೇಗೌಡ ಬಹು ಬೇಡಿಕೆಯ ನಟರು. ರಾಮ್ ರೆಡ್ಡಿ ನಿರ್ದೇಶನದ ‘ತಿಥಿ’ ಸಿನೆಮಾದಲ್ಲಿ ಕ್ರಮವಾಗಿ ಸೆಂಚ್ಯುರಿ ಗೌಡ ಮತ್ತು ಗಡ್ದಪ್ಪ ಪಾತ್ರ ನಿರ್ವಹಿಸಿದ್ದ ಈ ನಟರು ಈ ಪಾತ್ರಗಳ ಹೆಸರುಗಳಿಂದಲೇ ಕನ್ನಡ ನಾಡಿನಲ್ಲಿ ಚಿರಪರಿಚಿತ. ಈ ಜೋಡಿಯ ಜೊತೆ ಮತ್ತೊಬ್ಬ ಯುವ ನಟ ಅಭಿಷೇಕ್ ಕೂಡ ಸೇರಿದ್ದಾರೆ.
ಕನ್ನಡ ಸಿನೆಮಾಗಳಿಗೆ ಚಿತ್ರಮಂದಿರಗಳು ಸಿಗುತ್ತಿಲ್ಲ ಎಂಬ ಕೊರಗಿನ ಮಧ್ಯೆಯೂ ಈ ತ್ರಿವಳಿ ನಟರು ನಟಿಸರುವ ‘ಯೇನ್ ನಿನ್ ಪ್ರಾಬ್ಲಮ್ಮು’ ಚಿತ್ರ, ಈ ವಾರ ಬಿಡುಗಡೆಯಾಗುತ್ತಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿಯೇ ೧೫೦ ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ.
ಈ ಸಿನೆಮಾ ವಿತರಣೆ ಮಾಡುತ್ತಿರುವ ಜಾಕ್ ಮಂಜು, ಸಿನಿಮಾಮಂದಿರಗಳ ಮಾಲೀಕರು ಈ ಚಿತ್ರಪ್ರದರ್ಶನಕ್ಕೆ ಅಪಾರ ಬೇಡಿಕೆ ವ್ಯಕ್ತಪಡಿಸಿರುವುದಾಗಿ ತಿಳಿಸಿದ್ದಾರೆ. “ಬಹುಷಃ ಪ್ರೇಕ್ಷಕರಿಗೆ ಗಡ್ದಪ್ಪ ಮತ್ತು ಸೆಂಚ್ಯುರಿ ಗೌಡ ಸಂತೃಪ್ತಿಯಾಗಿ ಸಿಕ್ಕಿಲ್ಲ. ಈ ಇಬ್ಬರ ಸ್ವಾಭಾವಿಕ ನಟನೆಯನ್ನು ಜನ ಅತೀವವಾಗಿ ಇಷ್ಟಪಡುತ್ತಿದ್ದಾರೆ” ಎನ್ನುತ್ತಾರೆ.
‘ಯೇನ್ ನಿನ್ ಪ್ರಾಬ್ಲಮ್ಮು’ ಸಿನೆಮಾವನ್ನು ಗಾಳಿ ಲಕ್ಕಿ ನಿರ್ದೇಶಿಸಿದ್ದು, ಸೆಂಥಿಲ್ ಸಿನೆಮ್ಯಾಟೋಗ್ರಾಫರ್. ನವೀನ್ ಸಜ್ಜು ಈ ಸಿನೆಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.

Comments are closed.