ಕರ್ನಾಟಕ

‘ಡೆಕ್ಕನ್‌ ಹೆರಾಲ್ಡ್’ ಸುದ್ದಿ ಸಂಪಾದಕ ಜೆ.ಎಕ್ಸ್‌. ಆಂಥೊನಿ ನಿಕೊಲಸ್‌ ನಿಧನ

Pinterest LinkedIn Tumblr


ಬೆಂಗಳೂರು: ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಯ ಸಂಪಾದಕೀಯ ವಿಭಾಗದ ಸುದ್ದಿ ಸಂಪಾದಕ ಜೆ.ಎಕ್ಸ್‌. ಆಂಥೊನಿ ನಿಕೊಲಸ್‌(51) ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಆಂಥೊನಿ ನಿಕೊಲಸ್‌ ಅವರಿಗೆ ಬೆಳಗಿನಜಾವ 5ರ ಸುಮಾರಿಗೆ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿದ್ದು, ಕುಟುಂಬದ ಸದಸ್ಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆಸ್ಪತ್ರೆ ತಲುಪುವ ವೇಳೆಗೆ ನಿಧನರಾಗಿದ್ದಾರೆ. ಬಳಿಕ, ಮೃತದೇಹವನ್ನು ಬೆಂಗಳೂರಿನ ವಸಂತನಗರದಲ್ಲಿನ ಅವರ ನಿವಾಸಕ್ಕೆ ತರಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಆಂಥೊನಿ ನಿಕೊಲಸ್‌ ಅವರಿಗೆ ಪತ್ನಿ, ಪುತ್ರ ಇದ್ದಾರೆ.

Comments are closed.