ಮನೋರಂಜನೆ

‌ಭಾರತ ಮತ್ತು ಚೀನಾ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ‘ಕುಂಗ್‌ ಫು ಯೋಗ’.

Pinterest LinkedIn Tumblr


‌ಭಾರತ ಮತ್ತು ಚೀನಾ ಸಂಸ್ಥೆಗಳ ಸಹ ಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಸಾಹಸ ಮಯ ಚಿತ್ರ ‘ಕುಂಗ್‌ ಫು ಯೋಗ’.

ಇದೀಗ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಮಾರ್ಷಲ್‌ ಆರ್ಟ್‌ ಪ್ರವೀಣ ಜಾಕಿ ಚಾನ್‌ ಮತ್ತು ಭಾರತದ ಸೋನು ಸೂದ್‌ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಮಗಧ ಸಾಮ್ರಾಜ್ಯದ ಸಂಪತ್ತನ್ನು ಹುಡುಕಲು ಹೊರಡುವ ಚೀನಾ ಮತ್ತು ಭಾರತದ ಪ್ರೊಫೆಸರ್‌ಗಳು ಹಾಗೂ ಆ ನಡುವೆ ಎದುರಾಗುವ ಪೈಪೋಟಿ ಚಿತ್ರದ ಕಥಾ ಎಳೆ.

ಹಾಂಗ್‌ ಕಾಂಗ್‌ ನಿರ್ದೇಶಕ ಸ್ಟಾನ್ಲೇ ಟಾಂಗ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಭಿನ್ನ ಶೈಲಿಯ ಸಮರ ಕಲೆಗಳ ಅನಾವರಣದೊಂದಿಗೆ ಸಾಹಸಮಯ ದೃಶ್ಯಗಳ ಸಂಯೋಜನೆ ಗಮನ ಸೆಳೆಯುವಂತಿದೆ.

ದಿಶಾ ಪಟಾಣಿ, ಅಮಿರಾ ದಸ್ತೂರ್‌ ಮುಂತಾದವರ ಅಭಿನಯವಿದೆ. ಹಿಂದಿ, ಇಂಗ್ಲಿಷ್‌ ಹಾಗೂ ಮ್ಯಾಂಡರಿನ್‌ ಭಾಷೆಗಳಲ್ಲಿ ಸಿನಿಮಾ ತೆರೆ ಕಾಣಲಿದೆ.
ಭಾರತದಲ್ಲಿ ‘ಕುಂಗ್‌ ಫು ಯೋಗ’ ಫೆಬ್ರವರಿ 3ರಂದು ಬಿಡುಗಡೆಯಾಗಲಿದೆ.

Comments are closed.