ರಾಷ್ಟ್ರೀಯ

ನೋಟು ನಿಷೇಧದಿಂದ ಆರ್ಥಿಕ ಬೆಳವಣಿಗೆ ಕುಂಠಿತ

Pinterest LinkedIn Tumblr


ನವದೆಹಲಿ,ಜ.೧೭- ನಿರೀಕ್ಷೆಯಂತೆ ನೋಟು ನಿಷೇಧದ ಪರಿಣಾಮ ಭಾರತದ ಆರ್ಥಿಕ ಬೆಳವಣಿಗೆ ಮೇಲೆ ಪರಿಣಾಮ ಬೀರಲಿದ್ದು, ಐಎಂಎಫ್ ಭಾರತದ ಆರ್ಥಿಕ ಬೆಳವಣಿಗೆ ಅಂದಾಜನ್ನು ಶೇ ೭.೬ ರಿಂದ ಶೇ.೬.೬ ಕ್ಕೆ ಇಳಿಕೆ ಮಾಡಿದೆ.

೨೦೧೬-೧೭ ನೇ ಸಾಲಿನ ಆರ್ಥಿಕ ವರ್ಷದ ಆರ್ಥಿಕ ಬೆಳವಣಿಗೆ ವಿಶ್ವ ಆರ್ಥಿಕ ಮುನ್ನೋಟ ಅಥವಾ ಅಂದಾಜು ಮಂಡಿಸಿರುವ ಐಎಂಎಫ್, ನೋಟು ನಿಷೇಧದ ಪರಿಣಾಮದಿಂದ ತಾತ್ಕಾಲಿಕ ನಗದು ಬಿಕ್ಕಟ್ಟು ಉಂಟಾಗಿದ್ದು, ಬೆಳವಣಿಗೆ ದರವನ್ನು ಶೇ.೦೪ ರಷ್ಟು ಕಡಿತಗೊಳಿಸಲಾಗಿದೆ ಎಂದು ಐಎಂಎಫ್ ಹೇಳಿದೆ.

ಈ ಹಿಂದೆ ಐಎಂಎಫ್ ಭಾರತದ ಆರ್ಥಿಕ ಬೆಳವಣಿಗೆ ದರ ಶೇ.೭.೬ ರಷ್ಟಿರಲಿದೆ ಎಂದು ಅಂದಾಜು ಮಂಡಿಸಿತ್ತು, ನಂತರದ ಅಂದಾಜಿನಲ್ಲಿ ಶೇ.೭.೨ ರಷ್ಟಾಗಲಿದೆ ಎಂಬ ಅಂದಾಜು ಮಂಡನೆಯಾಗಿತ್ತು. ಇತ್ತೀಚಿನ ಮುನ್ನೋಟದಲ್ಲಿ ಆರ್ಥಿಕ
ಬೆಳವಣಿಗೆ ದರದ ಅಂದಾಜು ಶೇ ೬.೬ ರಷ್ಟಿರಲಿದೆ ಎಂದು ಹೇಳಿದೆ.

ಈ ಹಿಂದೆಯೇ ಹೇಳಿದಂತೆ ಐಎಂಎಫ್ ನೋಟು ನಿಷೇಧದಿಂದ ಉಂಟಾಗಿರುವ ಪರಿಣಾಮವನ್ನು ತಾತ್ಕಾಲಿಕ ಎಂದಿದ್ದು, ೨೦೧೮ ರ ವೇಳೆಗೆ ಭಾರತದ ಆರ್ಥಿಕ ಬೆಳವಣಿಗೆ ದರ ಮತ್ತೆ ಪುಟಿದೇಳಲಿದ್ದು ಶೇ.೭.೭ ರಷ್ಟಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ. ಇದೇ ವೇಳೆ ಚೀನಾದ ಆರ್ಥಿಕ ಬೆಳವಣಿಗೆ ದರದ ಮುನ್ನೋಟ ಸಹ ಲಭ್ಯವಾಗಿದ್ದು ಶೇ.೬.೫ ರಷ್ಟಿರಲಿದೆ ಎಂದು ತಿಳಿದುಬಂದಿದೆ.

Comments are closed.