ಮನೋರಂಜನೆ

ಫಿಲ್ಮ್ ಫೇರ್ ಪ್ರಶಸ್ತಿ 2017: ಶ್ರೇಷ್ಠ ನಟ ಅಮೀರ್ ಖಾನ್, ಶ್ರೇಷ್ಠ ನಟಿ ಆಲಿಯಾ ಭಟ್

Pinterest LinkedIn Tumblr

ಮುಂಬೈ: ಈಗಾಗಲೇ ಜನಮನ ಗೆದ್ದು ದಾಖಲೆ ಗಳಿಕೆ ಮಾಡಿರುವ ‘ದಂಗಲ್’ ಉತ್ತಮ ಚಿತ್ರಕ್ಕಾಗಿ ನೀಡುವ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಶನಿವಾರ ನಡೆದ 62ನೇ ಜಿಯೊ ಫಿಲ್ಮ್ ಫೇರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಾಲಿವುಡ್ ನಟ ಶಾರುಖ್ ಖಾನ್ ನಿರೂಪಣೆ ಮಾಡಿದ್ದರು.

‘ದಂಗಲ್’ ಚಿತ್ರದ ನಿರ್ದೇಶನಕ್ಕಾಗಿ ನಿತೇಶ್ ತಿವಾರಿ ಅವರಿಗೆ ಶ್ರೇಷ್ಠ ನಿರ್ದೇಶಕ, ‘ದಂಗಲ್’ ಚಿತ್ರದ ನಟನೆಗಾಗಿ ಅಮೀರ್ ಖಾನ್‍ಗೆ ಶ್ರೇಷ್ಠ ನಟ ಮತ್ತು ‘ಉಡ್ತಾ ಪಂಜಾಬ್’ ಚಿತ್ರದ ನಟನೆಗಾಗಿ ಆಲಿಯಾ ಭಟ್ ಅವರಿಗೆ ಶ್ರೇಷ್ಠ ನಟಿ ಪ್ರಶಸ್ತಿ ದಕ್ಕಿದೆ.
ಪ್ರಶಸ್ತಿ ವಿಜೇತರ ಪಟ್ಟಿ
ಫಿಲ್ಮ್ ಫೇರ್ ಕ್ರಿಟಿಕ್ಸ್ ಪ್ರಶಸ್ತಿ (ಉತ್ತಮ ಚಿತ್ರ) – ನೀರ್ಜಾ

ಫಿಲ್ಮ್ ಫೇರ್ ಕ್ರಿಟಿಕ್ಸ್ ಪ್ರಶಸ್ತಿ (ಶ್ರೇಷ್ಠ ನಟ)- ಶಾಹೀದ್ ಕಪೂರ್ (ಉಡ್ತಾ ಪಂಜಾಬ್ ), ಮನೋಜ್ ಭಾಜ್‍ಪೇಯಿ (ಅಲೀಗಢ್)

ಫಿಲ್ಮ್ ಫೇರ್ ಕ್ರಿಟಿಕ್ಸ್ ಪ್ರಶಸ್ತಿ (ಶ್ರೇಷ್ಠ ನಟಿ)- ಸೋನಂ ಕಪೂರ್ (ನೀರ್ಜಾ)

ಉತ್ತಮ ನಟ (ಕಿರುಚಿತ್ರ) – ಮನೋಜ್ ಭಾಜ್‍ಪೇಯಿ (ತಾಂಡವ್)

ಉತ್ತಮ ಕಿರುಚಿತ್ರ (ಜನರ ಆಯ್ಕೆ) – ಖಾಮಕಾ

ಉತ್ತಮ ಕಿರುಚಿತ್ರ (ಫಿಕ್ಷನ್) – ಚಟ್ನಿ

ಉತ್ತಮ ಕಿರುಚಿತ್ರ ( ನಾನ್ ಫಿಕ್ಷನ್) – ಮಟೀಟಾಲಿ ಕುಸ್ತಿ

ಉತ್ತಮ ಸಂಭಾಷಣೆ – ರಿತೇಶ್ ಷಾ (ಪಿಂಕ್)

ಉತ್ತಮ ಕಥೆ- ಶಾಕುನ್ ಬತ್ರಾ ಮತ್ತು ಅಯೇಷಾ ದಾವಿತ್ರೆ ದಿಲ್ಲೋನ್ (ಕಪೂರ್ ಆ್ಯಂಡ್ ಸನ್ಸ್ -ಸಿನ್ಸ್ 1921)

ಉತ್ತಮ ಸಹ ನಟಿ -ಶಬಾನಾ ಆಜ್ಮಿ (ನೀರ್ಜಾ)

ಉತ್ತಮ ಸಹ ನಟ – ರಿಷಿ ಕಪೂರ್ (ಕಪೂರ್ ಆ್ಯಂಡ್ ಸನ್ಸ್ -ಸಿನ್ಸ್ 1921)

ಜೀವಮಾನ ಸಾಧನೆ ಪ್ರಶಸ್ತಿ – ಶತ್ರುಘ್ನ ಸಿನ್ಹಾ

ಉತ್ತಮ ಮ್ಯೂಸಿಕ್ ಆಲ್ಬಂ – ಏ ದಿಲ್ ಹೈ ಮುಷ್ಕಿಲ್

ಉತ್ತಮ ಗಾಯಕ – ಅರಿಜೀತ್ ಸಿಂಗ್

ಉತ್ತಮ ಗಾಯಕಿ- ನೇಹಾ ಭಾಸಿನ್

Comments are closed.