ಕ್ರೀಡೆ

ಸಾನಿಯಾ ಧರಿಸುವ ಟೆನಿಸ್ ಸ್ಕರ್ಟ್ ಇಸ್ಲಾಂ ವಿರೋಧಿಯಂತೆ!

Pinterest LinkedIn Tumblr


ಹೈದರಾಬಾದ್: ಇತ್ತೀಚೆಗಷ್ಟೇ ಫೇಸ್ ಬುಕ್ ನಲ್ಲಿ ಮೈ ತೋರಿಸುವ ಉಡುಪು ಧರಿಸಿದ್ದಕ್ಕೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮತ್ತೊಮ್ಮೆ ಡ್ರೆಸ್ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಇಸ್ಲಾಂ ಧರ್ಮಗುರುಗಳು ಆಕೆಯ ಟೆನಿಸ್ ಉಡುಗೆಯನ್ನು ಪ್ರಶ್ನೆ ಮಾಡಿದ್ದಾರೆ.

ಮುಸ್ಲಿಂ ಧರ್ಮ ಗುರು ಸಾಜಿದ್ ರಶೀದ್ ಸಾನಿಯಾ ತುಂಡುಡುಗೆಯನ್ನು ಇಸ್ಲಾಂ ವಿರೋಧಿ ಎಂದಿದ್ದಾರೆ. “ಮಹಿಳೆಯರು ತಮ್ಮ ಬುರ್ಖಾ ತೆಗೆದಿಟ್ಟು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದಾದರೆ ಅಂತಹ ಆಟದಲ್ಲಿ ಅವರು ಭಾಗವಹಿಸಲೇ ಬಾರದು. ಸಾನಿಯಾ ಉಡುಗೆ ಸೆಕ್ಸುಯಲ್ ಮತ್ತು ಇಸ್ಲಾಂ ವಿರೋಧಿ” ಎಂದು ಸಾಜಿದ್ ಹೇಳಿಕೊಂಡಿದ್ದಾರೆ.

ಸಾನಿಯಾ ತನ್ನ ಮಿನಿ ಸ್ಕರ್ಟ್ ನಿಂದಲೇ ಜನಪ್ರಿಯರಾದವರು. ಟೆನಿಸ್ ಆಟದಲ್ಲಿ ಆಟಗಾರ್ತಿಯರು ಇಂತಹ ಉಡುಗೆ ತೊಡುವುದು ಸಾಮಾನ್ಯ. ಈ ರೀತಿ ಸಾನಿಯಾ ಉಡುಪಿನ ಬಗ್ಗೆ ಹಿಂದೆಯೂ ಹಲವು ಬಾರಿ ಧರ್ಮ ಗುರುಗಳು ಕಿಡಿ ಕಾರಿದ್ದುಂಟು. ಆದರೆ ಸಾನಿಯಾ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.

Comments are closed.