ಮನೋರಂಜನೆ

ಬಾಲಿವುಡ್ ನಟ ಅಮೀರ್ ಖಾನ್ ನಟನೆಯ ಪಿಕೆ ದಾಖಲೆ ಮುರಿದ ದಂಗಲ್: ಅತ್ಯಂತ ಹೆಚ್ಚು ಗಳಿಕೆ…!

Pinterest LinkedIn Tumblr

ನವದೆಹಲಿ: ಬಾಲಿವುಡ್ ನಟ ಅಮೀರ್ ಖಾನ್ ಅವರ ದಂಗಲ್ ಚಿತ್ರ ಬಾಲಿವುಡ್ ನ ಸರ್ವಕಾಲಿಕ ಅತೀ ಹೆಚ್ಚು ಗಳಿಕೆ ಕಂಡ ಚಿತ್ರವೆಂಬ ಖ್ಯಾತಿ ಗಳಿಸಿದೆ.

ಪ್ರತಿನಿತ್ಯ ಸುಮಾರು 20 ಕೋಟಿ ಗಳಿಕೆಯ ಸರಾಸರಿಯೊಂದಿಗೆ ದಂಗಲ್ ಚಿತ್ರ ಈ ವರೆಗೂ ಸುಮಾರು 344 ಕೋಟಿ ರು.ಗಳಿಸಿದ್ದು, ಬಾಲಿವುಡ್ ನಲ್ಲಿ ಅತ್ಯಂತ ಹೆಚ್ಚು ಗಳಿಕೆ ಚಿತ್ರವೆಂಬ ಖ್ಯಾತಿಗಳಿಸಿದೆ. ಚಿತ್ರ ತೆರೆಕಂಡ 18 ದಿನಗಳಲ್ಲಿ ಚಿತ್ರ ಸುಮಾರು 340 ಕೋಟಿ ರು.ಗೂ ಅಧಿಕ ಗಳಿಕೆ ಕಾಣುವ ಮೂಲಕ ನೂತನ ಬಾಕ್ಸ್ ಆಫೀಸ್ ದಾಖಲೆ ನಿರ್ಮಿಸಿದೆ ಎಂದು ಬಾಲಿವುಡ್ ತಜ್ಞರು ಹೇಳಿದ್ದಾರೆ. ಅಂತೆಯೇ ಬಾಲಿವುಡ್ ಇತಿಹಾಸದಲ್ಲಿ ಚಿತ್ರವೊಂದು 350 ಕೋಟಿ ರು.ಗಳಿಸಿದ ಖ್ಯಾತಿಗೂ ಶೀಘ್ರದಲ್ಲೇ ದಂಗಲ್ ಪಾತ್ರವಾಗಲಿದೆ ಎಂದು ಬಾಕ್ಸ್ ಆಫೀಸ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಾಲಿವುಡ್ ನಲ್ಲಿ ದಾಖಲೆ ನಿರ್ಮಾಣದಲ್ಲಿ ಅಮೀರ್ ಖಾನ್ ತಾವು ಸದಾ ಮುಂದು ಎಂದು ಮತ್ತೊಮ್ಮೆ ಸಾಬೀತು ಮಾಡಿದ್ದು, 350 ಕೋಟಿ ರು.ಗಳಿಕೆ ಕಂಡ ಬಾಲಿವುಡ್ ನ ಮೊದಲ ಚಿತ್ರ ಎಂಬ ಖ್ಯಾತಿಗೆ ದಂಗಲ್ ಪಾತ್ರವಾಗುತ್ತಿದೆ. ಈ ಹಿಂದೆ ಅಮೀರ್ ಖಾನ್ ಅಭಿನಯದ ಘಜಿನಿ ಚಿತ್ರ 100 ಕೋಟಿ ಗಳಿಸಿದ ಮೊದಲ ಬಾಲಿವುಡ್ ಚಿತ್ರ ಎಂಬ ಖ್ಯಾತಿ ಗಳಿಸಿತ್ತು. ಅಂತೆಯೇ 3 ಇಡಿಯಟ್ಸ್ ಚಿತ್ರ 200 ಕೋಟಿ ತೆರೆಕಂಡ ಮೊದಲ ಚಿತ್ರ, ಪಿಕೆ ಚಿತ್ರ 300 ಕೋಟಿ ಗಳಿಸಿದ ಮೊದಲ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿತ್ತು. ಇದೀಗ ದಂಗಲ್ ಚಿತ್ರ 350 ಕೋಟಿ ಗಳಿಕೆಯತ್ತ ದಾಪುಗಾಲಿರಿಸಿದ್ದು, ಇಷ್ಟು ಮೊತ್ತದ ಗಳಿಕೆ ಕಂಡ ಬಾಲಿವುಡ್ ನ ಮೊದಲ ಚಿತ್ರ ಎಂಬ ಖ್ಯಾತಿ ಪಾತ್ರವಾಗಲಿದೆ.

ಖ್ಯಾತ ಬಾಕ್ಸ್ ಆಫೀಸ್ ತಜ್ಞ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು, ಹಿಂದಿ ಚಿತ್ರೋಧ್ಯಮದಲ್ಲಿ ಹೊಸದೊಂದು ದಾಖಲೆಗೆ ಸಜ್ಜಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Comments are closed.