ರಾಷ್ಟ್ರೀಯ

ವರ್ಗಾವಣೆಗೆ ಸಂಬಂಧಿಸಿ ಸಚಿವೆ ಸುಷ್ಮಾ ಸ್ವರಾಜ್’ಗೆ ಟ್ವೀಟ್ ಮಾಡಿದ ವ್ಯಕ್ತಿಗೆ ನೀಡಿದ ಉತ್ತರವೇನು ಗೊತ್ತಾ..?

Pinterest LinkedIn Tumblr

ನವದೆಹಲಿ: ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಸಮಸ್ಯೆಗಳನ್ನು ಬಗೆಹರಿಸುವಂತೆ ಅಥವಾ ಸಹಾಯ ಮಾಡುವಂತೆ ತಮಗೆ ಟ್ವಿಟರ್ ನಲ್ಲಿ ಬರುವ ಮನವಿಗಳಿಗೆ ಸ್ಪಂದಿಸುವುದು ಹೊಸತೇನಲ್ಲ. ಹಾಗೆಯೇ ತಮಗೆ ಬಂದಿದ್ದ ಕ್ಷುಲ್ಲಕ ಮನವಿಗಳಿಗೆ ತಾಳ್ಮೆಯಿಂದ ಪ್ರತಿಕ್ರಿಯೆ ನೀಡಿದ ಉದಾಹರಣೆ ಇದೆ.

ಆದರೆ ಪುಣೆಯ ಐಟಿಯಲ್ಲಿ ಕೆಲಸ ಮಾಡುತ್ತಿರುವ ಮಹಾಶಯನೊಬ್ಬ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ತನ್ನ ಪತ್ನಿಗೆ ವರ್ಗಾವಣೆ ಮಾಡಿಸಬೇಕೆಂದು ಟ್ವಿಟರ್ ನಲ್ಲಿ ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿದ್ದಾನೆ. ಇದಕ್ಕೆ ಖಡಕ್ ಉತ್ತರ ನೀಡಿರುವ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್, ನಿಮ್ಮ ಪತ್ನಿ ಒಂದು ವೇಳೆ ನನ್ನ ಇಲಾಖೆಯ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದು, ಇಂತಹ ವರ್ಗಾವಣೆ ಬೇಡಿಕೆ ಮುಂದಿಟ್ಟಿದ್ದರೆ ಈ ವೇಳೆಗೆ ಅಮಾನತು ಆದೇಶ ಹೊರಡಿಸುತ್ತಿದ್ದೆ ಎಂದು ಹೇಳಿದ್ದಾರೆ. ಪುಣೆಯ ವ್ಯಕ್ತಿಗೆ ಪ್ರತಿಕ್ರಿಯೆ ನೀಡಿದ ನಂತರ ಸುಷ್ಮಾ ಸ್ವರಾಜ್ ಪುಣೆಯ ವ್ಯಕ್ತಿ ಮಾಡಿದ್ದ ಟ್ವೀಟ್ ನ್ನು ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಆ ಟ್ವೀಟ್ ನ್ನು ಕಳಿಸಿದ್ದಾರೆ.

ಅಮೆರಿಕದಲ್ಲಿರುವ ವ್ಯಕ್ತಿಯೊಬ್ಬ ಭಾರತದಲ್ಲಿರುವ ತನ್ನ ಪತ್ನಿಗೆ ಪಾಸ್ಪೋರ್ಟ್ ಪಡೆಯುವ ಸಂಬಂಧ ಎದುರಾಗಿದ್ದ ಸಮಸ್ಯೆ ಕುರಿತು ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದರು. “ನನ್ನ ಪತ್ನಿಗೆ ಪಾಸ್ಪೋರ್ಟ್ ಸಿಗದ ಕಾರಣ ನಾನು ಆಕೆಯಿಂದ ದೂರವಿರುವ ಅನಿವಾರ್ಯ ಪರಿಸ್ಥಿತಿ ಎದುರಿಸುತ್ತಿದ್ದೇನೆ, ನನ್ನ ಪತ್ನಿ ಪಾಸ್ಪೋರ್ಟ್ ಪಡೆಯುವುದಕ್ಕೆ ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಸುಷ್ಮಾ ಸ್ವರಾಜ್, ಈ ವನವಾಸ ಶೀಘ್ರವೇ ಅಂತ್ಯಗೊಳ್ಳಬೇಕು ಎಂದು ಟ್ವೀಟ್ ಮಾಡಿ ಪಾಸ್ಪೋರ್ಟ್ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.

ಇದನ್ನು ಗಮನಿಸಿದ ಪುಣೆಯ ವ್ಯಕ್ತಿ ತನ್ನ ಪತ್ನಿ ದೂರದ ಊರಿನಲ್ಲಿ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಳೆ, ತಾನು ಪುಣೆಯಲ್ಲಿ ಉದ್ಯೋಗ ಮಾಡುತ್ತಿದ್ದು, ಭಾರತದಲ್ಲಿ ನಮ್ಮ ವನವಾಸ ಅಂತ್ಯಗೊಳಿಸಲು ನನ್ನ ಪತ್ನಿ ವರ್ಗಾವಣೆಗೆ ಸಹಾಯ ಮಾಡಲು ಸಾಧ್ಯವೇ ಎಂದು ಸುಷ್ಮಾ ಸ್ವರಾಜ್ ಗೆ ಟ್ವೀಟ್ ಮಾಡಿದ್ದ.

ಈ ಘಟನೆಗೂ ಮುನ್ನ 2016 ರ ಜೂನ್ ನಲ್ಲಿ ವ್ಯಕ್ತಿಯೊಬ್ಬ ಸ್ಯಾಮ್ ಸಂಗ್ ಕಂಪನಿ ತನಗೆ ದೋಷಪೂರಿತ ಫ್ರಿಡ್ಜ್ ಮಾರಾಟ ಮಾಡಿರುವುದು ಅಲ್ಲದೆ, ಉತ್ಪನ್ನವನ್ನು ಬದಲಾವಣೆ ಮಾಡಲೂ ಒಪ್ಪುತ್ತಿಲ್ಲ, ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದ.

Comments are closed.