ಮನೋರಂಜನೆ

ಕಳ್ಳಿ ಪೊಲೀಸಪ್ಪನ ಪತ್ನಿ ಬಂಧನ!

Pinterest LinkedIn Tumblr
ಮನೆ ಒಡತಿ ಶ್ವೇತಾ, ಕಳ್ಳತನ ನಡೆದಿದ್ದನ್ನು ತೋರಿಸುತ್ತಿರುವುದು
ಮನೆ ಒಡತಿ ಶ್ವೇತಾ, ಕಳ್ಳತನ ನಡೆದಿದ್ದನ್ನು ತೋರಿಸುತ್ತಿರುವುದು

ಮುಂಬೈ: ಹೆಡ್ ಕಾನಸ್ಟೇಬಲ್ ಒಬ್ಬರ ಪತ್ನಿ ತಮ್ಮದೇ ಕಾಲೋನಿಯ ನೆರೆ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದಾಳೆ. ಈ ಘಟನೆ ನಗರದ ತಾರ್‍ದಿಯೋ ಪೊಲೀಸ್ ಕಾಲೋನಿಯಲ್ಲಿ ನಡೆದಿದೆ.

ಯೋಗಿತಾ ಯತ್ತೇಕಾರ್ ಕಳ್ಳತನ ಮಾಡಿ ಸಿಕ್ಕಿಬಿದ್ದ ಪೊಲೀಸಪ್ಪನ ಹೆಂಡತಿ. ಯೋಗಿತಾ ಅದೇ ಕಾಲೋನಿಯ ಮತ್ತೊಬ್ಬ ಅಧಿಕಾರಿಯ ಮನೆಯಲ್ಲಿ 140 ಗ್ರಾಂ ಬಂಗಾರ ಮತ್ತು 4 ಲಕ್ಷ ರೂ. ನಗದು ಕಳ್ಳತನ ಮಾಡಿದ್ದಳು. ಯೋಗಿತಾ ಪತಿ ಯೋಗೇಶ್ ಉತ್ತೇಕರ್ ಮಲ್‍ಬಾರ್ ಹಿಲ್ ಪೊಲೀಸ್ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿದ್ದಾರೆ.

ಕಳ್ಳತನ ಮಾಡಿದ್ದು ಹೀಗೆ:
ಶುಕ್ರವಾರ ಯೋಗಿತಾ ಅದೇ ಕಾಲೋನಿಯ ರೂಪೇಶ್ ಎಂಬುವರ ಮನೆಗೆ ಹೋಗಿದ್ದಾಳೆ. ಮನೆಯಲ್ಲಿ ರೂಪೇಶ್ ಪತ್ನಿ ಶ್ವೇತಾ ಒಂಟಿಯಾಗಿರುವದನ್ನು ಗಮನಿಸಿದ ಯೋಗಿತಾ ಮೊದಲು ರೂಪೇಶ್‍ನನ್ನು ಕೇಳಿದ್ದಾಳೆ. ಆದರೆ ರೂಪೇಶ್ ಮನೆಯಲ್ಲಿ ಇಲ್ಲ ಎಂದು ಶ್ವೇತಾ ಹೇಳಿದಾಗ ತಾನು ರೂಪೇಶ್ ಎಲ್‍ಐಸಿ ಪಾಲಿಸಿ ಏಜೆಂಟ್ ಎಂದು ಮನೆ ಒಳಗೆ ಹೋಗಿದ್ದಾಳೆ.

ಮನೆಯಲ್ಲಿರುವ ರೂಪೇಶ್ ಪತ್ನಿಗೆ ಕುಡಿಯಲು ನೀರು ಕೇಳಿದ್ದು, ನೀರು ತರಲು ಹೋದ ಶ್ವೇತಾರನ್ನು ಬಾತ್‍ರೂಮ್‍ನಲ್ಲಿ ಕೂಡಿ ಹಾಕಿ ಮನೆಯಲ್ಲಿರುವ ಚಿನ್ನ ಮತ್ತು ಕ್ಯಾಶ್ ತೊಗೊಂಡು ಪರಾರಿ ಆಗಿದ್ದಾಳೆ. ರೂಪೇಶ್ ಆರ್ಥಿಕ ಅಪರಾಧಗಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಕೊನೆಗೂ ಸಿಕ್ಕಿಬಿದ್ದಳು:
ರೂಪೇಶ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಮೊದಲು ಕಾಲೋನಿಯಲ್ಲಿ ವಾಸವಾಗಿರುವ ಜನರನ್ನ ತನಿಖೆಗೆ ಒಳಪಡಿಸಿದಾಗ ಹೊಸದಾಗಿ ಬಂದಿರುವ ಯೋಗಿತಾಳ ಮೇಲೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಇತ್ತೀಚಿಗೆ ಕಾಲೋನಿಯ ಮನೆಗಳಲ್ಲಿ ಮೌಲ್ಯವಾದ ವಸ್ತುಗಳು ಕಳುವಾಗಿದ್ದು ತಾವು ದೂರು ದಾಖಲಿಸಿಲ್ಲ ಜನರು ಎಂದು ತಿಳಿಸಿದ್ದಾರೆ.

ಪೊಲೀಸರು ಯೋಗಿತಾಳನ್ನು ಪ್ರಶ್ನಿಸಿದಾಗ ತಾನು ಊರಲ್ಲಿ ಇರಲಿಲ್ಲ. ನಾನು ನೆರೂಲ್ ತೆರಳಿದ್ದಾಗಿ ರೈಲ್ವೆ ಟಿಕೆಟ್ ತೋರಿಸಿದ್ದಾಳೆ. ಯೋಗಿತಾ ಮೊಬೈಲ್ ನೆಟ್‍ವರ್ಕ ಚೆಕ್ ಮಾಡಿದಾಗ ಕಳ್ಳತನ ನಡೆದ ವೇಳೆಯಲ್ಲಿ ಯೋಗಿತಾ, ರೂಪೇಶ್ ಮನೆಯ ಹತ್ತಿರ ಇರುವುದು ಪತ್ತೆಯಾಗಿದೆ. ನಂತರ ಯೋಗಿತಾಳನ್ನು ಬಂಧಿಸಲಾಗಿದೆ ಎಂದು ತಾರ್‍ದಿಯೋ ಠಾಣೆಯ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಪಂಢರಿ ಕಂಡೆ ತಿಳಿಸಿದ್ದಾರೆ.

ಮೂರು ಬಾರಿ ಡ್ರೆಸ್ ಚೇಂಜ್ ಮಾಡಿದ್ದಳು:
ಕಳ್ಳತನ ಮಾಡಿದ ನಂತರ ಯೋಗಿತಾ ಮನೆಯಿಂದ ಸಿಎಸ್‍ಟಿ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದಳು. ಅಲ್ಲಿ ನೆರೂಲ್ ಟಿಕೆಟ್ ಪಡೆದು ಅಲ್ಲಿಯ ಪಬ್ಲಿಕ್ ಟಾಯ್ಲೆಟ್‍ನಲ್ಲಿ ಡ್ರೆಸ್ ಬದಲಿಸಿದ್ದಳು. ಕೊನೆಗೆ ಬರುವಾಗ ಮತ್ತೊಮ್ಮೆ ಡ್ರೆಸ್ ಚೇಂಜ್ ಮಾಡಿ ಮನೆಗೆ ಬಂದಿದ್ದಳು. ಎಷ್ಟೆ ಪ್ಲಾನ್ ಮಾಡಿದರೂ ಯೋಗಿತಾ ಈಗ ಪೊಲೀಸರ ಅತಿಥಿಯಾಗಿದ್ದಾಳೆ.

Comments are closed.