ಮನೋರಂಜನೆ

ಹಾಲಿವುಡ್‌ ಚಿತ್ರದಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿದ್ದೇನೆ: ದೀಪಿಕಾ ಪಡುಕೋಣೆ

Pinterest LinkedIn Tumblr

deepika-final
ಮುಂಬೈ: ವಿಶ್ವದಾದ್ಯಂತ ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ‘ಟ್ರಿಪಲ್‌ ಎಕ್ಸ್‌’ಸರಣಿಯ ಚಿತ್ರದಲ್ಲಿ ಪಾತ್ರ ಗಿಟ್ಟಿಸಿಕೊಳ್ಳುವ ಮೂಲಕ ದೀಪಿಕಾ ದೊಡ್ಡಮಟ್ಟದಲ್ಲಿಯೇ ಹಾಲಿವುಡ್‌ಗೆ ಎಂಟ್ರಿ ಪಡೆದಿದ್ದಾರೆ.

2017ರ ಜ.14ಕ್ಕೆ ದೀಪಿಕಾ ಅಭಿನಯದ ‘ಟ್ರಿಪಲ್‌ ಎಕ್ಸ್‌ ಗ್ಸ್ಯಾಂಡಿಯಾರ್ ಕೇಜ್‌’ (xxx xander cage returns) ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ಚಿತ್ರದ ಟ್ರೇಲರ್‌ ಬಿಡುಗಡೆಗೊಂಡಿದ್ದು, ಭಾರೀ ಸದ್ದು ಮಾಡಿದೆ. ಟ್ರೇಲರ್‌ನಲ್ಲಿ ಕಂಡಂತೆ ಸಾಹಸ ದೃಶ್ಯಗಳಲ್ಲಿ ಪಾಲ್ಗೊಂಡಿರುವ ದೀಪಿಕಾ, ಸಖತ್‌ ಹಾಟ್‌ ಆಗಿಯೂ ಕಾಣಿಸಿಕೊಂಡಿದ್ದಾರೆ.

ಹಾಲಿವುಡ್‌ ಪಯಣದ ಬಗ್ಗೆ ಮುಂಬೈನಲ್ಲಿ ಮಾತನಾಡಿರುವ ಅವರು ‘ಹಾಲಿವುಡ್‌ನಲ್ಲಿ ಇದು ನನ್ನ ಮೊದಲ ಪ್ರಯತ್ನವಾಗಿದ್ದು, ಸಂಭ್ರಮಿಸುತ್ತಿದ್ದೇನೆ. ಇದರೊಂದಿಗೆ ಭಯ, ಕಾತುರವೂ ಹೆಚ್ಚಿದೆ’ ಎಂದು ಹೇಳಿದ್ದಾರೆ.

ಚಿತ್ರದ ನಾಯಕ ವಿನ್‌ ಡೀಸೆಲ್‌ನ ಪ್ರಿಯತಮೆ ‘ಸೆರೆನಾ ಉಂಜರ್‌’ ಪಾತ್ರದಲ್ಲಿ ದೀಪಿಕಾ ನಟಿಸಿದ್ದು, ಡಿ. ಜೆ ಕರುಸೊ ಚಿತ್ರ ನಿರ್ದೇಶಿಸಿದ್ದಾರೆ. ಡೋನ್ನಿ ಯೆನ್, ಟೋನಿ ಜಾ, ಸ್ಯಾಮ್ಯುಯೆಲ್‌ ಎಲ್‌ ಜಾಕ್ಸನ್‌,ನೀನಾ ಡೊಬ್ರೆವ್‌ ಇತರರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಅಂತರ ರಾಷ್ಟ್ರೀಯ ಸಿನಿಮಾ ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗುತ್ತಿದೆ ಎಂದು 30 ವರ್ಷದ ನಟಿ ದೀಪಿಕಾ ಪಡುಕೋಣೆ ಸಂತಸ ವ್ಯಕ್ತಪಡಿಸಿದ್ದಾರೆ.

Comments are closed.