ಮನೋರಂಜನೆ

2017ರಲ್ಲೂ ಮೊದಲ ಬಿಡುಗಡೆ ಚಿತ್ರ ಶಿವರಾಜ್ ಕುಮಾರ್ ನಟನೆಯ ಶ್ರೀಕಂಠ

Pinterest LinkedIn Tumblr

shivaraj
ಕಳೆದ ವರ್ಷ ಕಿಲ್ಲಿಂಗ್ ವೀರಪ್ಪನ್ ಚಿತ್ರದ ಮೂಲಕ ಖಾತೆ ತೆರೆದಿದ್ದರು ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್. 2016ರಲ್ಲಿ ಬಿಡುಗಡೆಯಾದ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಆ ಸಿನಿಮಾ ಪಾತ್ರವಾಗಿತ್ತು. ಈ ವರ್ಷವೂ ಶಿವಣ್ಣನ ಚಿತ್ರ 2017ರ ಮೊದಲ ಚಿತ್ರವಾಗಿ ಬರುತ್ತಿದೆ.

ಶೀರ್ಷಿಕೆಯಲ್ಲೇ ಒಂಥರಾ ಪವರ್ ಇರುವಂತ ಶ್ರಿಕಂಠ ಈ ವರ್ಷ ಸ್ಯಾಂಡಲ್‌ವುಡ್‌ನ ಮೊದಲ ಚಿತ್ರವಾಗಿ ಜನವರಿ 6ಕ್ಕೆ ತೆರೆಗೆ ಬರುತ್ತಿದೆ. ಈ ಮೂಲಕ ಶಿವಣ್ಣ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆ ನೀಡುತ್ತಿದ್ದಾರೆ. ಈಗಾಗಲೆ ಸೆನ್ಸಾರ್ ಆಗಿರುವ ಶ್ರೀಕಂಠನಿಗೆ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.

ಮನು ಗೌಡ ನಿರ್ಮಿಸಿರುವ ಈ ಚಿತ್ರದ ನಾಯಕಿ ಚಾಂದಿನಿ ಶ್ರೀಧರನ್. ವಿಜಯ್ ರಾಘವೇಂದ್ರ ಸಹ ತಾರಾಬಳಗದಲ್ಲಿದ್ದು ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಇಟ್ಟುಕೊಂಡಿದ್ದಾರೆ ಅಭಿಮಾನಿಗಳು. ಅಜನೀಶ್ ಲೋಕನಾಥ್ ಸಂಗೀತ ಇರುವ ಚಿತ್ರವನ್ನು ಶ್ರೀಧರ್ ಅವರು ಎನ್ಎಂ ಎಂಟರ್‌ಟೇನ್‍ಮೆಂಟ್ ಲಾಂಛನದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.

Comments are closed.