ಬೀಜಿಂಗ್: ಚೀನಾದಲ್ಲಿ ಪ್ರಪಂಚದ ಅತೀ ಎತ್ತರದ ಸೇತುವೆ ಲೋಕಾರ್ಪಣೆಗೊಂಡಿದೆ.
ಜೈಪಾಂಜಿಯಾಂಗ್ ಸೇತುವೆ ಎರಡು ಬೆಟ್ಟಗಳಾದ ಯೂನಾನ್ ಮತ್ತು ಗ್ಯುಝೋವುವಿನ ಮೇಲೆ ನಿರ್ಮಿಸಲಾಗಿದೆ. ಬೆಟ್ಟಗಳ ನಡುವೆ ನದಿಯೊಂದು ಹರಿಯುತ್ತಿದ್ದು ಸುಮಾರು 1,854 ಅಡಿ ಮೇಲೆ ಸೇತುವೆ ನಿರ್ಮಾಣ ಮಾಡಲಾಗಿದೆ.
ಈ ಸೇತುವೆಯಿಂದ ಯೂನಾನ್ ಮತ್ತು ಗ್ಯುಝೋವುವಿನ ನಡುವಿನ ನಾಲ್ಕು ಗಂಟೆಗಳ ಪ್ರಯಾಣ ಕಡಿಮೆಯಾದಂತಾಗಿದೆ. ಈ ಎರಡು ನಗರಗಳಿಗೆ ತೆರಳುವವರು ಇದೀಗ ಸುಲಭವಾಗಿ ಪ್ರಯಾಣಿಸಬಹುದಾಗಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.
ಜೈಪಾಂಜಿಯಾಂಗ್ ಸೇತುವೆ ಸುಮಾರು 1,341 ಮೀಟರ್ ಉದ್ದವಿದ್ದು ಇದಕ್ಕೆ ಒಂದು ಬಿಲಿಯನ್ ಯುವಾನ್ ಖರ್ಚಾಗಿದೆ ಎಂದು ಗ್ಯುಝೋವುವಿ ದಿನಪತ್ರಿಕೆಯೊಂದು ವರದಿ ಮಾಡಿದೆ,
ಚೀನಾದಲ್ಲಿ ಹಲವು ಎತ್ತರದ ಸೇತುವೆಗಳಿದ್ದು ಇದಕ್ಕೆ ಮತ್ತೊಂದು ಸೇರ್ಪಡೆ ಜೈಪಾಂಜಿಯಾಂಗ್ ಸೇತುವೆ.