ರಾಷ್ಟ್ರೀಯ

ಇಎಸ್ಐ ಸೌಲಭ್ಯ ಪಡೆಯಲು ತಿಂಗಳ ವೇತನ ಮಿತಿ ರೂ. 21 ಸಾವಿರಕ್ಕೆ ಏರಿಕೆ

Pinterest LinkedIn Tumblr

esi-corporation
ಇಎಸ್ಐ ಸೌಲಭ್ಯ ಪಡೆಯಲು ನೌಕರರ ತಿಂಗಳ ವೇತನ ಮಿತಿಯನ್ನು ಕೇಂದ್ರ ಸರ್ಕಾರ ರೂ. 15 ಸಾವಿರದಿಂದ ರೂ. 21 ಸಾವಿರಕ್ಕೆ ಏರಿಸಿದೆ. ಇದರಿಂದಾಗಿ ರೂ. 21 ಸಾವಿರದವರಗೆ ತಿಂಗಳ ವೇತನ ಪಡೆಯುವ ಎಲ್ಲಾ ನೌಕರರು ಇಎಸ್ಐ ಸೌಲಭ್ಯ ಪಡೆಯಬಹುದಾಗಿದೆ.
ಜನವರಿ 1, 2017 ರಿಂದ ಇದು ಜಾರಿಗೆ ಬರಲಿದ್ದು, ಈಗಾಗಲೆ ಇಎಸ್ಐಐ ಸೌಲಭ್ಯ ಹೊಂದಿರುವವರು ತಮ್ಮ ತಿಂಗಳ ಸಂಬಳ ರೂ. 21,000 ದ ಮಿತಿ ತಲುಪುವವರೆಗೂ ತಮ್ಮ ಸದಸ್ಯತ್ವವನ್ನು ಮುಂದುವರಿಸಬಹುದು.
ಇದಲ್ಲದೆ, ಇಎಸ್ಐ ಸೌಲಭ್ಯಕ್ಕೆ ಹೊಸದಾಗಿ ಸೇರ್ಪಡೆಯಾದ ಪ್ರದೇಶಗಳ ಉದ್ಯೋಗದಾತರಿಗೆ ನೋಂದಣಿ ಮಾಡಿಕೊಳ್ಳಲು ವಿಶೇಷ ರಿಯಾಯಿತಿಯನ್ನು ನೀಡಲಾಗಿದೆ. ಈಗ ಅವರು ಸಂಬಳದ 4% ರಷ್ಟು ಹಣವನ್ನು ಮಾತ್ರ ತಮ್ಮ ಕೊಡುಗೆಯಾಗಿ ನೀಡಬೇಕಾಗುವುದು. ಇತರೆ ಪ್ರದೇಶಗಳ ಉದ್ಯೋಗದಾತರಿಗೆ ಅದು 6.5% ಇರುತ್ತದೆ.

Comments are closed.