ಮನೋರಂಜನೆ

ಆಮಿರ್ ಖಾನ್ ವಿರುದ್ಧ ಬಿಜೆಪಿ ಸಾಮಾಜಿಕ ಮಾಧ್ಯಮ ಘಟಕದಿಂದ ಪ್ರಚಾರ

Pinterest LinkedIn Tumblr

aamir-khan
ನವದೆಹಲಿ: ಕಳೆದ ವರ್ಷ ನವೆಂಬರ್ ನಲ್ಲಿ ಅಸಹಿಷ್ಣುತೆ ಪರವಾಗಿ ಹೇಳಿಕೆ ನೀಡುವ ಮೂಲಕ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಬಾಲಿವುಡ್ ಸೂಪರ್ ಸ್ಟಾರ್ ಆಮಿರ್ ಖಾನ್ ಅವರ ವಿರುದ್ಧ ಪ್ರಚಾರ ಮಾಡಿದ್ದ ಬಿಜೆಪಿ ಮಾಧ್ಯಮ ಘಟಕ, ಅವರನ್ನು ಸ್ನ್ಯಾಪ್ ಡೀಲ್ ರಾಯಭಾರಿ ಹುದ್ದೆಯಿಂದ ಕೈಬಿಡುವಂತೆ ಒತ್ತಡ ಹೇರಿತ್ತು ಎಂದು ಬಿಡುಗಡೆಗೆ ಸಿದ್ಧವಾಗಿರುವ ಪುಸ್ತಕವೊಂದು ಹೇಳಿದೆ.
ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರು ಬರೆದಿರುವ ‘ಐ ಆಮ್ ಟ್ರೊಲ್’ ಪುಸ್ತಕದಲ್ಲಿ 2015ರ ಅಂತ್ಯದಲ್ಲಿ ಬಿಜೆಪಿ ಸಾಮಾಜಿಕ ಮಾಧ್ಯಮ ತಂಡಕ್ಕೆ ರಾಜಿನಾಮೆ ನೀಡಿದ್ದ ಸಾಧವಿ ಖೋಸ್ಲಾ ಅವರು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅರವಿಂದ್ ಗುಪ್ತಾ ಅವರಿಗೆ ಕಳುಹಿಸಿದ ವಾಟ್ಸ್ ಆಪ್ ಸಂದೇಶವನ್ನು ಹಂಚಿಕೊಂಡಿರುವುದಾಗಿ ಪುಸ್ತಕದಲ್ಲಿ ವಿವರಿಸಲಾಗಿದೆ.
ನವೆಂಬರ್ 23, 2015ರಂದು ರಾಮನಾಥ್ ಗೋಯಂಕಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ್ದ ಆಮಿರ್ ಖಾನ್ ಅವರು, ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದ್ದು, ಇದರಿಂದ ಆತಂಕಗೊಂಡ ನನ್ನ ಪತ್ನಿ(ಕಿರಣ್ ರಾವ್) ದೇಶ ಬಿಟ್ಟು ಹೋಗೋಣ ಎಂದು ಹೇಳಿರುವುದಾಗಿ ತಿಳಿಸಿದ್ದರು. ಇದು ದೇಶಾದ್ಯಂತ ತೀವ್ರ ಟೀಕೆಗೆ ಕಾರಣವಾಗಿತ್ತು.

Comments are closed.