ರಾಷ್ಟ್ರೀಯ

ಏರ್ ಇಂಡಿಯಾ ವಿಮಾನ ಪ್ರಯಾಣ ದರ 849 ರೂ..!

Pinterest LinkedIn Tumblr

air-india
ಹೊಸ ವರ್ಷದ ಯೋಜನೆಯ ಅಂಗವಾಗಿ ಒಮ್ಮುಖವಾಗಿ ಬೆಂಗಳೂರು-ಹೈದರಾಬಾದ್ ನಡುವೆ 849 ರೂಪಾಯಿಗೆ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ.
ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ತನ್ನ ಪ್ರಯಾಣಿಕರಿಗೆ ಹೊಸ ವರ್ಷದ ಅಂಗವಾಗಿ ಪ್ರಯಾಣಿಕ ಸ್ನೇಹಿ ಮಿತವ್ಯಯಿ ಶುಲ್ಕದ ಟಿಕೆಟ್ ಆಫರ್ ಘೋಷಿಸಿದೆ. ಹೊಸ ವರ್ಷದ ಯೋಜನೆಯ ಅಂಗವಾಗಿ ಒಮ್ಮುಖವಾಗಿ ಬೆಂಗಳೂರು-ಹೈದರಾಬಾದ್ ನಡುವೆ 849 ರೂಪಾಯಿಗೆ ವಿಮಾನದಲ್ಲಿ ಪ್ರಯಾಣ ಮಾಡಬಹುದಾಗಿದೆ.
ಡಿಸೆಂಬರ್ 31, 2016ರೊಳಗೆ ನೀವು ಟಿಕೆಟ್ ಬುಕ್ ಮಾಡಿದರೆ ಜನವರಿ 15 ರಿಂದ ಏಪ್ರಿಲ್ 30ರೊಳಗೆ ಪ್ರಯಾಣ ಮಾಡಬಹುದಾಗಿದೆ. ಚೆನ್ನೈ-ಕೊಯಿಂಬತ್ತೂರ್, ಬೆಂಗಳೂರು-ಹೈದರಾಬಾದ್ ನಡುವೆ 849 ರೂಪಾಯಿಗಳಲ್ಲಿ ಪ್ರಯಾಣಿಸಬಹುದೆಂದು ಏರ್’ಲೈನ್ಸ್ ತನ್ನ ವೆಬ್’ಸೈಟ್’ನ ಪ್ರಕಟನೆಯಲ್ಲಿ ತಿಳಿಸಿದೆ.
ಇದಷ್ಟೇ ಅಲ್ಲದೇ ಬೆಂಗಳೂರು-ಚೆನ್ನೈ ನಡುವೆ ರೂ.1,199; ಮುಂಬೈ-ಗೋವಾ ರೂ.1,499; ಮುಂಬೈ-ಬೆಂಗಳೂರು 1,599 ರೂಗಳಲ್ಲಿ ಪ್ರಯಾಣಿಸಬಹುದೆಂದು ಏರ್ ಇಂಡಿಯಾ ತಿಳಿಸಿದೆ.
ಮುಂಬರುವ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡು ಇತ್ತೀಚಿನ ದಿನಗಳಲ್ಲಿ ವಿಮಾನಯಾನ ಸಂಸ್ಥೆಗಳು ಸ್ಪರ್ಧಾತ್ಮಕ ದರದಲ್ಲಿ ಪ್ರಯಾಣಿಕರಿಗೆ ಆಫರ್’ಗಳನ್ನು ನೀಡುತ್ತಿವೆ.

Comments are closed.