ಮನೋರಂಜನೆ

ಅಸ್ಸಾಂ ಪ್ರವಾಸೋದ್ಯಮ ರಾಯಭಾರಿಯಾಗಿ ಪ್ರಿಯಾಂಕಾ ಚೋಪ್ರಾ

Pinterest LinkedIn Tumblr
Priyanka Chopra at press conference of her new album 'In my city' in Bangalore on Friday ./Photo by Kishor Kumar Bolar
Priyanka Chopra 

ಅಸ್ಸಾಂ: ಅಸ್ಸಾಂ ರಾಜ್ಯದ ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗಿ ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಎರಡು ವರ್ಷಗಳ ವರೆಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಆಯ್ಕೆ ಅಸ್ಸಾಂ ರಾಜ್ಯ ಸರ್ಕಾರ ತಿಳಿಸಿದೆ.

ಪ್ರವಾಸೋದ್ಯಮ ಸಚಿವ ಹಿಮಾಂತ ಬಿಸ್ವ ಶರ್ಮಾ ಅವರು ‘ಈ ಮೊದಲು ತಮ್ಮ ರಾಜ್ಯದ ಪ್ರವಾಸೋದ್ಯಮದ ಪ್ರಚಾರ ರಾಯಭಾರಿಯಾಗುವಂತೆ ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡುಲ್ಕರ್‌ ಅವರಿಗೆ ಆಹ್ವಾನ ನೀಡಿದ್ದೆವು. ಆದರೆ ಅವರು ಇದಕ್ಕೆ ಒಪ್ಪದ ಕಾರಣ ನಾವು ಪ್ರಿಯಾಂಕಾ ಚೋಪ್ರಾರಿಗೆ ಆಹ್ವಾನ ನೀಡಿದ್ದೆವು. ನಮ್ಮ ಮನವಿಯನ್ನು ಪುರಸ್ಕರಿಸಿರುವ ಅವರು ಯಾವುದೇ ಸಂಭಾವನೆ ಪಡೆಯದೆ, ರಾಯಭಾರಿಯಾಗುವುದಾಗಿ ಒಪ್ಪಿಕೊಂಡ್ಡಿದ್ದಾರೆ. ಈ ಸಂಬಂಧ ಈಗಾಗಲೇ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ’ ಎಂದು ತಿಳಿಸಿದ್ದಾರೆ.

ನಾವು ಅವರಿಗೆ ಕೇವಲ ಶೂಟಿಂಗ್‌ ಹಾಗೂ ಜಾಹೀರಾತು ವೆಚ್ಚವನ್ನಷ್ಟೇ ಭರಿಸಲಿದ್ದೇವೆ ಎಂದೂ ಸಹ ತಿಳಿಸಿದ್ದಾರೆ.

Comments are closed.