ರಾಷ್ಟ್ರೀಯ

ಮಸೀದಿಗಳಲ್ಲಿ ನಡೆಯುವ ಅನಧಿಕೃತ ಶರಿಯತ್ ಕೋರ್ಟ್’ಗಳನ್ನು ನಿಷೇಧಿಸಿದ ಮದ್ರಾಸ್ ಹೈಕೋರ್ಟ್

Pinterest LinkedIn Tumblr

Muslim-Womenಚೆನ್ನೈ (ಡಿ.19): ತಮಿಳುನಾಡಿನ ಮಸೀದಿಗಳಲ್ಲಿ ನಡೆಯುವ ಅನಧಿಕೃತ ಶರೀಯಾ ಕೋರ್ಟ್’ಗಳು ಇನ್ಮುಂದೆ ಕಾರ್ಯಾಚರಿಸುವಂತಿಲ್ಲವೆಂದು ಮದ್ರಾಸ್ ಹೈಕೋರ್ಟ್ ಆದೇಶ ನೀಡಿದೆ.
ಧಾರ್ಮಿಕ ಸ್ಥಳಗಳು ಧಾರ್ಮಿಕ ಚಟುವಟಿಗೆಗಳಿಗೆ ಸೀಮಿತವಾಗಿರಬೇಕೆಂದು ಹೇಳಿರುವ ಹೈಕೋರ್ಟ್, 2 ವಾರಗಳೊಳಗೆ ಆದೇಶವನ್ನು ಜಾರಿಗೊಳಿಸಿ ವರದಿ ನೀಡುವಂತೆ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಅನಿವಾಸಿ ಭಾರತೀಯ ಅಬ್ದುಲ್ ರೆಹಮಾನ್ ಎಂಬವರು, ಚೆನ್ನೈ’ನಲ್ಲಿ ಮಕ್ಕಾ ಮಸಿದಿಯಲ್ಲಿರುವ ಶರಿಯತ್ ಕೌನ್ಸಿಲ್ ಒಂದು ನ್ಯಾಯಾಲಯದ ರೀತಿಯಲ್ಲೇ ಕಾರ್ಯಾಚರಿಸುತ್ತಿದೆ, ಹಾಗೂ ತಾನು ಶರೀಯತ್ ಪ್ರಕಾರ ನ್ಯಾಯಾದಾನ ಮಾಡುವುದಾಗಿ ಮುಸ್ಲಿಮರನ್ನು ನಂಬಿಸಿ, ಆದೇಶಗಳನ್ನು ಹೊರಡಿಸುತ್ತಿದೆ ಎಂದು ದೂರಿ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು.
ತಾನು ಕೂಡಾ ಆ ಶರೀಯತ್ ಕೋರ್ಟ್’ನ ಸಂತ್ರಸ್ತನೆಂದು ಅರ್ಜಿದಾರ ಹೇಳಿಕೊಂಡಿದ್ದಾರೆ.

Comments are closed.