ಅಂತರಾಷ್ಟ್ರೀಯ

ವಿಮಾನ ನಿಲ್ದಾಣದಲ್ಲಿ ಮೇಕೆ ಬಲಿ

Pinterest LinkedIn Tumblr

goat_ಇಸ್ಲಾಮಾಬಾದ್(ಡಿ.19): ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಎಟಿಆರ್-42 ವಿಮಾನ ಹಾರಾಟಕ್ಕೆ ಮುನ್ನ ಪಾಕಿಸ್ತಾನ ರಾಷ್ಟ್ರೀಯ ನೌಕೆಯ ಸಿಬ್ಬಂದಿ ಕಪ್ಪು ಬಣ್ಣದ ಮೇಕೆಯನ್ನು ಬಲಿಕೊಟ್ಟಿದ್ದಾರೆ.
ಫ್ರಾನ್ಸ್ ನಿರ್ಮಿತ ಟರ್ಬೊಪ್ರಾಪ್ ವಿಮಾನ ಪತನಗೊಂಡ ಪರಿಣಾಮ 47 ಮಂದಿ ಸಾವಿಗೀಡಾಗಿದ್ದು, ಇಂಥ ಘಟನೆಗಳು ಮರುಕಳಿಸಬಾರದು ಎಂಬ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಎಟಿಆರ್ ವಿಮಾನ ಕಾರ್ಯಾಚರಿಸುವ ಹಿನ್ನೆಲೆಯಲ್ಲಿ ಕೃತಜ್ಞತಾಪೂರಕವಾಗಿ ಮೇಕೆ ಬಲಿ ಕೊಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಡಿ.7ರಂದು ಹವೇಲಿಯನ್ ಬಳಿ ವಿಮಾನ ಪತನದಲ್ಲಿ 47 ಮಂದಿ ಮೃತರಾದ ಬಳಿಕ ವಿಮಾನ ನಿಲ್ದಾಣದಿಂದ ಯಾವುದೇ ವಿಮಾನಗಳು ಹಾರಾಟ ನಡೆಸಿರಲಿಲ್ಲ.

Comments are closed.