ಮನೋರಂಜನೆ

ನೋಟು ನಿಷೇಧ; ಪ್ರಧಾನಿ ಮೋದಿಗೆ ಎಲ್ಲರೂ ಬೆಂಬಲ ನೀಡಬೇಕೆಂದು ಕರೆ ನೀಡಿದ ನಟ ಅಮೀರ್ ಖಾನ್

Pinterest LinkedIn Tumblr

modi-aamir

ಮುಂಬೈ: ಬಾಲಿವುಡ್ ನಟ ಅಮೀರ್ ಖಾನ್ ಕೇಂದ್ರ ಸರ್ಕಾರದ 500, 1000 ರೂ ಮುಖಬೆಲೆಯ ನೋಟು ನಿಷೇಧ ಕ್ರಮವನ್ನು ಸ್ವಾಗತಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಲ್ಲರೂ ಬೆಂಬಲ ನೀಡಬೇಕೆಂದು ಕರೆ ನೀಡಿದ್ದಾರೆ.

ಕಪ್ಪುಹಣದ ವಿರುದ್ಧ ಕೇಂದ್ರ ಸರ್ಕಾರ ಕೈಗೊಂಡಿರುವ ನೋಟು ನಿಷೇಧ ಕ್ರಮವನ್ನು ದೇಶದ ಎಲ್ಲಾ ನಾಗರಿಕರು ಬೆಂಬಲಿಸಬೇಕು ಎಂದಿರುವ ಅಮೀರ್ ಖಾನ್, ನೋಟು ನಿಷೇಧದಿಂದ ಸಹಜವಾಗಿ ಸಾಮಾನ್ಯ ಜನರಿಗೆ ಸಮಸ್ಯೆಯಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ” ನನ್ನ ಬಳಿ ಕಪ್ಪುಹಣ ಇರದ ಹಿನ್ನೆಲೆಯಲ್ಲಿ ನೋಟು ನಿಷೇಧ ಕ್ರಮದಿಂದ ನನಗೆ ಯಾವುದೇ ಸಮಸ್ಯೆಯಾಗಿಲ್ಲ. ನಾನು ತೆರಿಗೆ ಪಾವತಿಸುತ್ತೇನೆ. ಆದ್ದರಿಂದ ಕೇಂದ್ರ ಸರ್ಕಾರದ ನಿರ್ಧಾರ ಕಪ್ಪುಹಣ ಹೊಂದಿದ್ದವರಿಗೆ ಮಾತ್ರ ಸಮಸ್ಯೆಯಾಗಿ ಪರಿಣಮಿಸಿದೆ. ನಾನು ಕಾರ್ಡ್ ಮೂಲಕ ವಹಿವಾಟು ನಡೆಸುತ್ತೇನೆ” ಎಂದು ಅಮೀರ್ ಖಾನ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ.

ಜನಸಾಮಾನ್ಯರಿಗೆ ಸಮಸ್ಯೆಯಾಗಿದೆ. ಆ ಬಗ್ಗೆ ಬೇಸರ ಇದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅತ್ಯುತ್ತಮ ನಿರ್ಧಾರ ಕೈಗೊಂಡಿದ್ದು, ಅವರ ಕ್ರಮವನ್ನು ದೇಶದ ನಾಗರಿಕರು ಬೆಂಬಲಿಸಬೇಕಿದೆ ಎಂದು ಅಮೀರ್ ಖಾನ್ ಕರೆ ನೀಡಿದ್ದಾರೆ. ನೋಟು ನಿಷೇಧ ಕ್ರಮ ಕೈಗೊಂಡಿರುವ ಕೇಂದ್ರ ಸರ್ಕಾರ ಸಾರ್ವಜನಿಕರು ಡಿಜಿಟಲ್ ವಹಿವಾಟು ನಡೆಸುವುದಕ್ಕೆ ಉತ್ತೇಜನ ನೀಡುತ್ತಿದೆ. ನಾನು ಅರ್ಥಶಾಸ್ತ್ರಜ್ಞನಲ್ಲ. ಯಾರಾದರೂ ಒಳ್ಳೆಯ ಕೆಲಸ ಮಾಡಿದರೆ ಅವರಿಗೆ ಬೆಂಬಲ ನೀಡಬೇಕು ಸಿನಿಮಾ ರಂಗದಲ್ಲಿರುವ ನಾನು ಅರ್ಥಶಾಸ್ತ್ರದ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಸದ್ಯದಲ್ಲೇ ತೆರೆ ಕಾಣಲಿರುವ ದಂಗಾಲ್ ಚಿತ್ರದ ನಾಯಕ ಅಮೀರ್ ಖಾನ್ ಹೇಳಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಬೇಕೆಂದು ಹೇಳಿರುವ ಬಾಲಿವುಡ್ ನಟ 2015 ನವೆಂಬರ್ ನಲ್ಲಿ ಅಸಹಿಷ್ಣುತೆ ವಿಚಾರವಾಗಿ ಮಾತನಾಡಿ ದೇಶದಲ್ಲಿ ಕಳೆದ ಆರೇಳು ತಿಂಗಳುಗಳಿಂದ ನಡೆಯುತ್ತಿರುವ ಘಟನೆಗಳು ಅಭದ್ರತೆ ಮತ್ತು ಭೀತಿಯ ವಾತಾವರಣ ಉಂಟುಮಾಡಿದೆ. ಅಸಹಿಷ್ಣುತೆ ಹೆಚ್ಚುತ್ತಿರುವ ಬಗ್ಗೆ ಪತ್ನಿ ಕಿರಣ್‌ ರಾವ್‌ ಆತಂಕಕ್ಕೆ ಒಳಗಾಗಿದ್ದಳು. ಕುಟುಂಬ ಸಮೇತ ದೇಶ ಬಿಟ್ಟು ಹೋಗುವ ಬಗ್ಗೆ ಪ್ರಸ್ತಾಪಿಸಿದ್ದಳು’ ಎಂದು ಹೇಳಿದ್ದು ವಿವಾದಕ್ಕೀಡಾಗಿತ್ತು.

Comments are closed.