ರಾಷ್ಟ್ರೀಯ

ಮೋದಿಗೆ ಅರ್ಥಶಾಸ್ತ್ರದ ಬಗ್ಗೆ ಜ್ಞಾನವಿಲ್ಲ… ಇತಿಹಾಸದಲ್ಲಿ ಅನುತ್ತೀರ್ಣಗೊಳ್ಳುತ್ತಿರುತ್ತಾರೆ: ಕಾಂಗ್ರೆಸ್ ಕಿಡಿ

Pinterest LinkedIn Tumblr

Washington: Prime Minister Narendra Modi addressing a joint meeting of Congress on Capitol Hill in Washington on Wednesday. PTI Photo by Kamal Kishore(PTI6_8_2016_000205A)

ಕೋಲ್ಕತಾ: ಇಂದಿರಾ ಗಾಂಧಿ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ ಹೇಳಿಕೆಗೆ ಕಿಡಿಕಾರಿರುವ ಕಾಂಗ್ರೆಸ್, ಮೋದಿಯವರಿಗೆ ಅರ್ಥಶಾಸ್ತ್ರದ ಬಗ್ಗೆ ಜ್ಞಾನವಿಲ್ಲ, ಇತಿಹಾಸದಲ್ಲಿ ಅನುತ್ತೀರ್ಣಗೊಳ್ಳುತ್ತಿರುತ್ತಾರೆಂದು ಶನಿವಾರ ಹೇಳಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಓಂ ಪ್ರಕಾಶ್ ಮಿಶ್ರಾ ಅವರು, ಆಡಳಿತಾರೂಡ ಸರ್ಕಾರದ ದುಬಾರಿ ನೋಟಿನ ಮೇಲೆ ನಿಷೇಧ ಹೇರಿದ್ದು, ನೋಟು ನಿಷೇಧ ದೊಡ್ಡ ಆರ್ಥಿಕ ಹಗರಣವಾಗಿದೆ ಎಂದು ಹೇಳಿದೆ.

ನಮ್ಮ ದೇಶದ ಪ್ರಧಾನಮಂತ್ರಿ ಆರ್ಥಶಾಸ್ತ್ರವನ್ನು ಅರ್ಥಮಾಡಿಕೊಳ್ಳದೆ ಇರುವುದು ನಿಜಕ್ಕೂ ದುರಾದೃಷ್ಟಕರ ಸಂಗತಿ. ಪ್ರಧಾನಿ ಮೋದಿಯವರು ಯಾವಾಗಲೂ ಇತಿಹಾಸದಲ್ಲಿ ಅನುತ್ತೀರ್ಣರಾಗುತ್ತಿರುತ್ತಾರೆ. ಅವರಿಂದ 40 ವರ್ಷಗಳ ಇತಿಹಾಸ ಹಾಗೂ ದೇಶದ ಅಭಿವೃದ್ಧಿ ಪ್ರಯಾಣವನ್ನು ಕೇಳಿವುದು ಕಷ್ಟಕರವಾಗಿರುತ್ತದೆ ಎಂದು ಹೇಳಿದ್ದಾರೆ
.
ಮೋದಿಯವರು ಇಂದು ತೆಗೆದುಕೊಂಡಿರುವ ನಿರ್ಧಾರ ಅತೀ ದೊಡ್ಡ ಆರ್ಥಿಕ ಹಗರಣವಾಗಿದೆ. ಅಭಿವೃದ್ಧಿಗೊಳ್ಳುತ್ತಿರುವ ಭಾರತದಂತಹ ದೇಶದ ಆರ್ಥಿಕತೆ ದೊಡ್ಡ ಹೊಡೆತವನ್ನು ನೀಡಿದ್ದಾರೆ. ಹೀಗಾಗಿ ಅವರ ಮೇಲೆ ನಂಬಿಕೆ ಇಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

Comments are closed.