ಮನೋರಂಜನೆ

‘ಆತಿ ಕ್ಯಾ ಖಂಡಾಲಾ’ ಹಾಡಿ 18 ವರ್ಷಗಳ ನಂತರ ಮತ್ತೊಂದು ಹಾಡು ಹಾಡಿದ ಅಮೀರ್ ಖಾನ್

Pinterest LinkedIn Tumblr

amir-newಮುಂಬೈ: ೧೯೯೮ರ ‘ಗುಲಾಮ್’ ಸಿನೆಮಾದ ಜನಪ್ರಿಯ ಹಾಡು ‘ಆತಿ ಕ್ಯಾ ಖಂಡಾಲಾ’ ಹಾಡಿ ಪ್ರೇಕ್ಷಕರ ಮನಸೂರೆಗೊಂಡಿದ್ದ ಅಮೀರ್ ಖಾನ್ ಈಗ ೧೮ ವರ್ಷಗಳ ನಂತರ ಮತ್ತೆ ಹಾಡಿದ್ದಾರೆ. ಅವರ ಮುಂಬರಲಿರುವ ‘ದಂಗಾಲ್’ ಸಿನೆಮಾದಲ್ಲಿ ‘ಢಾಕಾಡ್’ ಹಾಡಿನ ಒಂದು ಆವೃತ್ತಿಯನ್ನು ಅವರು ಹಾಡಿದ್ದಾರೆ.
ಅಮೀರ್ ಈ ಹಾಡಿನ ವಿಡಿಯೋ ರೆಕಾರ್ಡ್ ಮಾಡಿ ಮುಗಿಸಿದ್ದು, ಇದು ಮೊದಲ ಬಾರಿಗೆ ಲಕ್ಸ್ ಗೋಲ್ಡನ್ ರೋಸ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾಗಲಿದೆ.
ಈ ಕಾರ್ಯಕ್ರಮವನ್ನು ಶಾರುಖ್ ಖಾನ್ ಮತ್ತು ಕರಣ್ ಜೋಹರ್ ಜೊತೆಗೆ ಅರ್ಜುನ್ ಕಪೂರ್ ನಡೆಸಿಕೊಡಲಿದ್ದು, ಅಲ್ಲಿ ವಿಡಿಯೋ ಬಿಡುಗಡೆಯಾಗಲಿದೆ.
ನಿತೇಶ್ ತಿವಾರಿ ನಿರ್ದೇಶನದ ‘ದಂಗಾಲ್’ ಡಿಸೆಂಬರ್ ೨೩ ಕ್ಕೆ ಬಿಡುಗಡೆಯಾಗಲಿದೆ.

Comments are closed.