ಮನೋರಂಜನೆ

ಕಂಗನಾ ಸಂಭಾವನೆ 15 ಕೋಟಿ ರೂ.!

Pinterest LinkedIn Tumblr

kanganaನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ‘ಪದ್ಮಾವತಿ’ ಚಿತ್ರದ ಚಿತ್ರೀಕರಣ ಶುರುವಾಗಿ ತಿಂಗಳು ಕಳೆದಿಲ್ಲ. ಆಗಲೇ ಚಿತ್ರದ ಬಗ್ಗೆ ಹೊಸ ಹೊಸ ಬ್ರೇಕಿಂಗ್ ನ್ಯೂಸ್ಗಳು ಹರಿದಾಡುತ್ತಿವೆ. ಇದೀಗ ಕೇಳಿಬರುತ್ತಿರುವ ಸುದ್ದಿ ಪ್ರಕಾರ, ‘ಪದ್ಮಾವತಿ’ಗೆ ದೀಪಿಕಾ ಪಡುಕೋಣೆಗಿಂತ ಮೊದಲು ಕಂಗನಾ ರಣಾವತ್ ಅವರನ್ನು ಆಯ್ಕೆ ಮಾಡಲಾಗಿತ್ತಂತೆ. ಆದರೆ ಕಂಗನಾ ಸಂಭಾವನೆ ಕೇಳಿ ನಿರ್ವಪಕರು ಹೌಹಾರಿದ್ದಾರೆ! ಚಿತ್ರದಲ್ಲಿ ನಟಿಸಲು ಈ ‘ಕ್ವೀನ್’ ಬರೋಬ್ಬರಿ 15 ಕೋಟಿ ರೂ. ಡಿಮ್ಯಾಂಡ್ ಮಾಡಿದ್ದರಂತೆ!!

ಇಷ್ಟೊಂದು ಸಂಭಾವನೆ ಕೇಳಿದ್ದಕ್ಕೆ ಅವರನ್ನು ಚಿತ್ರದಿಂದ ಕೈಬಿಟ್ಟ ನಿರ್ದೇಶಕ ಬನ್ಸಾಲಿ, ಕೊನೆಗೆ ದೀಪಿಕಾಗೆ ಮಣೆ ಹಾಕಿದ್ದಾರೆ. ಅವರಿಗೆ 12 ಕೋಟಿ ರೂ. ಸಂಭಾವನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು, ಸಂಭಾವನೆ ವಿಚಾರದಲ್ಲಿ ಕಟ್ಟುನಿಟ್ಟಾಗಿರುವ ಕಂಗನಾ, ಮುಂದಿನ ಚಿತ್ರಗಳಿಗೆ 15 ಕೋಟಿ ರೂ.ಗಳನ್ನೇ ಪಡೆಯುವುದಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ, ಅವರು ತೆಗೆದುಕೊಳ್ಳುವ ಸಂಭಾವನೆ ಬಗ್ಗೆ ಯಾರೂ ಮಾತನಾಡುವುದು ಅವರಿಗಿಷ್ಟವಿಲ್ಲವಂತೆ. ‘ಒಂದು ಸಿನಿಮಾಗೆ ನಾನೆಷ್ಟು ಪಡೆಯುತ್ತೇನೆ ಎಂಬುದು, ನನಗಷ್ಟೇ ತಿಳಿದಿದ್ದರೆ ಸಾಕು. ಬೇರೆಯವರು ಅದನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ’ ಎಂದಿದ್ದಾರೆ.

ಇನ್ನು ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ಕಂಗನಾಗೆ ಪ್ರಶಸ್ತಿ ಪ್ರದಾನ ಸಮಾರಂಭಗಳ ಮೇಲೆ ನಂಬಿಕೆ ಇಲ್ಲ ಎಂದರೆ ನೀವು ನಂಬಲೇಬೇಕು. ‘ಈ ಬಾರಿ ಯಾರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯಬಹುದು’ಎಂಬ ಮಾಧ್ಯಮ ಪ್ರಶ್ನೆಗೆ ಖಾರವಾಗಿಯೇ ಉತ್ತರಿಸಿರುವ ಅವರು, ‘ಪ್ರಶಸ್ತಿ ಆಯ್ಕೆ ಸಮಿತಿಯ ಜ್ಯೂರಿ ನಾನಲ್ಲ. ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ನಾನು ಹೋಗುವುದಿಲ್ಲ, ನನಗೆ ಪ್ರಶಸ್ತಿಗಳ ಮೇಲೆ ನಂಬಿಕೆಯೂ ಇಲ್ಲ. ಹೀಗಿರುವಾಗ ಯಾರಿಗೆ ಪ್ರಶಸ್ತಿ ಬಂದರೆ ನನಗೇನು’ ಎಂದಿದ್ದಾರೆ ಅವರು. ವಿಶೇಷವೆಂದರೆ, 2016ರಲ್ಲಿ ಅವರ ಯಾವ ಚಿತ್ರವೂ ತೆರೆಕಂಡಿಲ್ಲ.

Comments are closed.