ಕರ್ನಾಟಕ

ಅಪ್ರಾಪ್ತ ವಿದ್ಯಾರ್ಥಿನಿಯ ಅತ್ಯಾಚಾರ: ಶಿಕ್ಷಕನ ಬಂಧನ

Pinterest LinkedIn Tumblr

rapeಬೆಂಗಳೂರು,ಡಿ.12-ಹತ್ತನೇ ತರಗತಿಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಗಣಿತ ಶಿಕ್ಷಕನೊಬ್ಬನನ್ನು ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಇಲಿಯಾಸ್ ನಗರ ಹಾರೂನ್ ಪಾಷಾ (28) ಬಂಧಿತ ಆರೋಪಿಯಾಗಿದ್ದು ಈತ ತಾನು ಶಿಕ್ಷಕನಾಗಿದ್ದ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯನ್ನು ಪ್ರೀತಿಸುತ್ತಿದ್ದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ದೂರಿನ ಹಿನ್ನಲೆಯಲ್ಲಿ ಬಂಧಿಸಲಾಗಿದೆ.
ಶಾಲೆಯ ಅವಧಿ ಮುಗಿದ ಬಳಿಕ 10ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ಆತ ವಿಶೇಷ ತರಗತಿ ತೆಗೆದುಕೊಳ್ಳುತ್ತಿದ್ದ.ಮಾತ್ರವಲ್ಲ ಪರೀಕ್ಷೆಗೆ ಬರುವ ಸಂಭವನೀಯ ಪ್ರಶ್ನೆಗಳ ಬಗ್ಗೆಯೂ ಆಕೆಗೆ ಸಹಾಯ ಮಾಡುತ್ತಿದ್ದು ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು.
ಅಪ್ರಾಪ್ತ ಬಾಲಕಿಯನ್ನು ಹಾರೂನ್ ಪಾಷಾ ಪ್ರೀತಿಸುತ್ತಿದ್ದ ವಿಷಯ ತಿಳಿಯುತ್ತಿದ್ದಂತೆ ಆಡಳಿತ ಮಂಡಳಿ ಪಾಷಾನನ್ನು ಕೆಲಸದಿಂದ ತೆಗದುಹಾಕಿತ್ತು,ಅಲ್ಲದೇ ಬಾಲಕಿಯ ತಂದೆ ತಾಯಿ ಪಾಷಗೆ ಬುದ್ದಿ ಹೇಳಿ ಆಕೆಯನ್ನು ಶಾಲೆ ಬಿಡಿಸಿ ಮತ್ತೊಂದು ಶಾಲೆಗೆ ಸೇರಿಸಿದ್ದರು.
ನಂತರವೂ ಇವರಿಬ್ಬರ ಕದ್ದು ಮುಚ್ಚಿ ಭೇಟಿಯಾಗುತ್ತಿರುವುದು ವಸತಿಗೃಹವೊಂದರಲ್ಲಿ ತಂಗಿರುವುದು ಗೊತ್ತಾಗಿ ಪೋಷಕರು ದೂರು ನೀಡಿದ್ದು ಪ್ರಕರಣ ದಾಖಲಿಸಿದ ಕುಮಾರಸ್ವಾಮಿ ಲೇಔಟ್ ಪೊಲೀಸರು ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪದಲ್ಲಿ ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ಅವರು ತಿಳಿಸಿದ್ದಾರೆ.

Comments are closed.