ರಾಷ್ಟ್ರೀಯ

ಮುಂದೆ ಕಿಲೋ ಮೀಟರ್ ದೂರದ ವರೆಗಿನ ಕ್ಯೂಗೆ ಕೈಮೇಲೆ ಕ್ರಮ ಸಂಖ್ಯೆ!

Pinterest LinkedIn Tumblr

morada-%e0%b3%8d%e0%b2%87%e0%b2%a8%e0%b2%bb%e0%b2%b2ಮೊರದಾಬಾದ್: ನೋಟು ರದ್ದು ಪರಿಣಾಮ ಎಟಿಎಂಗಳ ಮುಂದೆ ಕ್ಯೂನಿಲ್ಲುವ, ತಾಮುಂದು ನಾಮುಂದು ಎಂದು ತಳ್ಳಾಡುವ, ಅಷ್ಟೇ ಏಕೆ… ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೂ ತಲುಪುವಂತಹ ತಾಪತ್ರಯಗಳು ಇನ್ನೂ ನಿಂತಿಲ್ಲ. ಈ ನಡುವೆ ಉತ್ತರ ಪ್ರದೇಶದ ಮೊರದಾಬಾದ್ನಲ್ಲಿ ಎಟಿಎಂ ಒಂದರ ಮುಂದೆ ಕಿಲೋ ಮೀಟರ್ ದೂರದ ವರೆಗಿನ ಕ್ಯೂನಲ್ಲಿ ಇಂಥ ಘಟನೆಗಳು ನಡೆಯಬಾರದೆನ್ನುವ ಕಾರಣಕ್ಕಾಗಿ ಕ್ಯೂನಲ್ಲಿ ನಿಲ್ಲುವವರ ಕೈಮೇಲೆ ಸೀರಿಯಲ್ ನಂಬರ್ ಹಾಕಲಾಗುತ್ತಿದೆ. ಎಟಿಎಂನ ಸೆಕ್ಯೂರಿಟಿ ನಂಬರ್ ನೋಡಿಯೇ ಡ್ರಾ ಮಾಡಿಕೊಳ್ಳಲು ಅವಕಾಶ ನೀಡುವ ಕ್ರಮ ಅನುಸಲಾಗುತ್ತಿದೆ.

ಸ್ಥಳೀಯ ಪ್ರಕಾರ ಈ ಕ್ರಮ ಅನುಸರಿಸಿದ ಬಳಿಕ ತಳ್ಳಾಟಗಳು, ಜಗಳ ಕಡಿಮೆಯಾಗಿವೆಯಂತೆ. ಎಟಿಎಂಗಳಲ್ಲಿ ಹಣವೇ ಸಿಗದ ಸ್ಥಿತಿ ಒಂದಿಷ್ಟು ಕಡೆಯಾದರೆ, ಇನ್ನೊಂದಿಷ್ಟು ಕಡೆ ಕ್ಯೂನಿಂತು ಹಣ ಡ್ರಾ ಮಾಡಿಕೊಂಡು ಬರಲಿಕ್ಕೇ ಗಂಟೆಗಟ್ಟಲೇ ಕಾಯಬೇಕಾದ ಸ್ಥಿತಿ ಇದೆ.

Comments are closed.