ರಾಷ್ಟ್ರೀಯ

ಚಂಡಮಾರುತಕ್ಕೆ ಹೆಸರು ಹೇಗೆ ಇಡಲಾಗುತ್ತದೆ?

Pinterest LinkedIn Tumblr

cyclone-tamilnaduಚಂಡಮಾರುತದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲು ಹಾಗೂ ಏಳುವ ಚಂಡಮಾರುತದ ಕುರಿತು ಗೊಂದಲ ನಿವಾರಣೆಗಾಗಿ ಅಧಿಕೃತವಾಗಿ ಹೆಸರಿಡುವ ಪ್ರಕ್ರಿಯೆ ನಡೆಯುತ್ತಿದೆ.

ಪ್ರಸ್ತುತ ಚಂಡುಮಾರುತಕ್ಕೆ ‘ವಾರ್ದಾ’ ಹೆಸರು ನೀಡಿರುವುದು ಪಾಕಿಸ್ತಾನ. ವಾರ್ದಾ ಎಂದರೆ ಕೆಂಪು ಗುಲಾಬಿ ಎನ್ನುವ ಅರ್ಥವಿದೆ.

ಹಿಂದೂ ಮಹಾ ಸಾಗರದಿಂದ ಸುತ್ತುವರಿದಿರುವ ರಾಷ್ಟ್ರಗಳು ಅಪ್ಪಳಿಸುವ ಚಂಡಮಾರುತಕ್ಕೆ 2004ರಿಂದ ಹೆಸರಿಡುತ್ತಿವೆ. ವಿಶ್ವ ಪವನಶಾಸ್ತ್ರ ಸಂಸ್ಥೆ(WMO) ಚಂಡಮಾರುತಗಳಿಗೆ ಹೆಸರಿಡುವ ಕ್ರಮವನ್ನು ಜಾರಿಗೆ ತಂದಿದೆ.

ಭಾರತ, ಶ್ರೀಲಂಕಾ, ಬಾಂಗ್ಲಾದೇಶ, ಪಾಕಿಸ್ತಾನ, ಥೈಲ್ಯಾಂಡ್, ಮ್ಯಾನ್ಮಾರ್, ಮಾಲ್ಡೀವ್ಸ್ ಹಾಗೂ ಒಮಾನ್ ಸರತಿಯಂತೆ ಹೆಸರು ಸೂಚಿಸುತ್ತವೆ. ಇತ್ತೀಚೆಗೆ ಭಾರತದಲ್ಲಿ ಕಾಣಿಸಿಕೊಂಡ ನಾಡಾ ಚಂಡಮಾರುತಕ್ಕೆ ಒಮಾನ್ ದೇಶ ಹೆಸರು ನೀಡಿತ್ತು.

ಈ ಮೇಲಿನ ಎಂಟು ರಾಷ್ಟ್ರಗಳು ಚಂಡಮಾರುತಗಳಿಗೆ ಹೆಸರಿಡಲು ಈಗಾಗಲೇ 64 ಹೆಸರಿನ ಪಟ್ಟಿ ಸಿದ್ಧಪಡಿಸಿವೆ. ಪ್ರತಿ ರಾಷ್ಟ್ರ ಎಂಟು ಹೆಸರು ಸೂಚಿಸುವ ಅವಕಾಶ ಪಡೆದುಕೊಂಡಿವೆ.

ಕೆಲವು ಚಂಡಮಾರುಗಳ ಹೆಸರು:
ನಿಲೋಫರ್‌– ಪಾಕಿಸ್ತಾನ
ಪ್ರಿಯಾ– ಶ್ರೀಲಂಕಾ
ಕೋಮೆನ್‌–ಥೈಲ್ಯಾಂಡ್‌
ಚಪಲಾ– ಬಾಂಗ್ಲಾದೇಶ
ಮೇಘ್‌– ಭಾರತ
ರೋನು–ಮಾಲ್ಡೀವ್ಸ್‌
ನಾಡಾ–ಓಮನ್‌
ಹುಡ್‌ಹುಡ್‌–ಓಮನ್‌

Comments are closed.