ರಾಷ್ಟ್ರೀಯ

ಸಾಮಾಜಿಕ ಜಾಲತಾಣಗಳಲ್ಲಿ ಜಯಾಲಲಿತಾ ಮಗಳ ಚಿತ್ರ

Pinterest LinkedIn Tumblr

chinamayi-finalಚೆನ್ನೈ/ಬೆಂಗಳೂರು: ಈ ಮೇಲಿನ ಚಿತ್ರದಲ್ಲಿರುವ ಯುವತಿಯ ಪೋಟೊ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಪುತ್ರಿಯದ್ದು ಎಂಬ ಸುದ್ದಿ ಕೆಲವು ದಿನಗಳಿಂದ ವಾಟ್ಸ್ಅಪ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದು ಸುಳ್ಳು ಸುದ್ದಿ ಎಂಬುದು ಇದೀಗ ದೃಡಪಟ್ಟಿದೆ.

70ರ ದಶಕದಲ್ಲಿ ಜಯಲಲಿತಾಗೆ ಮದುವೆಯಾಗಿದ್ದು, ಅವರಿಗೆ ಶ್ರೀಹರ್ಷ ಎಂಬ ಹೆಣ್ಣು ಮಗು ಜನಿಸಿದ್ದು ಆಕೆಯನ್ನು ಯಾರಿಗೂ ಗೊತ್ತಿಲ್ಲದ್ದಂತೆ ಜಯಲಲಿತಾ ಬೆಳೆಸಿದ್ದರು ಎಂಬ ಸುದ್ದಿ ಚಿತ್ರ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.

ಸುಳ್ಳು ಸುದ್ದಿ: ಇದು ಸುಳ್ಳು ಸುದ್ದಿಯಾಗಿದ್ದು , ಚಿತ್ರದಲ್ಲಿರುವ ಯುವತಿ ಮೃದಂಗ ವಿದ್ವಾನ್ ಬಾಲಾಜಿ ಅವರ ಕುಟುಂಬಕ್ಕೆ ಸೇರಿದವರಾಗಿದ್ದು ಜಯಲಲಿತಾಗೂ ಅವರಿಗೂ ಯಾವುದೇ ಸಂಬಂಧ ಇಲ್ಲ ಎಂದು ಗಾಯಕಿ ಚಿನ್ಮಯಿ ಶ್ರೀಪಾದ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.

ಆ ಯುವತಿಯ ಕುಟುಂಬದವರ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪ್ರಕಟಿಸುವ ಮೂಲಕ ಚಿನ್ಮಯಿ ಸ್ಪಷ್ಟನೆ ನೀಡಿದ್ದಾರೆ.

ಮುಖ ಚಹರೆ ಹೋಲಿಕೆಯಾಗುತ್ತಿದೆ ಎಂಬ ಮಾತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮನಸ್ಸಿಗೆ ತೋಚಿದಂತೆ ಚಿತ್ರಗಳನ್ನು ಪ್ರಕಟಿಸಬಾರದು. ಅದರ ಸತ್ಯಾಸತ್ಯತೆಯನ್ನು ಅರಿತು ಪ್ರಕಟಿಸಬೇಕು ಇಲ್ಲವಾದಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ ಎಂದು ಚಿನ್ಮಯಿ ಶ್ರೀಪಾದ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಕಿಡಿಕಾರಿದ್ದಾರೆ.

Comments are closed.