ಮನೋರಂಜನೆ

ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದ ನಿರಂಜನ್; ಎಲ್ಲರಿಗೂ ಕಿಚ್ಚ ಸುದೀಪ್ ನೀಡಿದರು ಶಾಕ್ !

Pinterest LinkedIn Tumblr

niranja

ಬೆಂಗಳೂರು: ಬಿಗ್‌ಬಾಸ್‌ ಮನೆ ಶನಿವಾರ ನಿರಂಜನ್‌ ದೇಶಪಾಂಡೆ ಹೊರಬಿದ್ದಿದ್ದಾರೆ. ಆರಂಭದಿಂದ ಇದ್ದ ಲವಲವಿಕೆ ಕಳೆದುಕೊಂಡಿದ್ದ ನಿರಂಜನ್ ಅವರು ಕೀರ್ತಿ, ಶಾಲಿನಿ ಗುಂಪಿನಿಂದ ಹೊರಬಂದು, ತಮ್ಮನ್ನು ಕಡೆಗಣಿಸುತ್ತಿರುವ ಬಗ್ಗೆ ಬಿಗ್‌ಬಾಸ್‌ ಮನೆಮಂದಿಯೊಂದಿಗೆ ಹಲವು ಬಾರಿ ಅಳಲನ್ನು ತೋಡಿಕೊಂಡಿದ್ದರು. ಈಗ ಅವರು ಬಿಗ್‌ಬಾಸ್‌ ಮನೆಯ ಪ್ರಯಾಣವನ್ನು ಮುಗಿಸಿದ್ದಾರೆ.

ಈ ವಾರ ಬಿಗ್‌ಬಾಸ್‌ ಮನೆಯಲ್ಲಿ ಪ್ರಥಮ್‌, ಭುವನ್‌, ಮಾಳವಿಕಾ, ಮೋಹನ್‌, ಶೀತಲ್‌ ಮತ್ತು ನಿರಂಜನ್‌ ಎಲಿಮಿನೇಶನ್‌ಗೆ ನಾಮಿನೇಟ್‌ ಆಗಿದ್ದರು. ಕಿಚ್ಚ ಸುದೀಪ್ ನಡೆಸಿಕೊಡುವ ಪಂಚಾಯತಿಯಲ್ಲಿ ನಿರಂಜನ್ ಮನೆಯಿಂದ ಹೊರಬರುದನ್ನು ಘೋಷಿಸಿದರು.

ಈ ವಾರ ತಾನು ಬಿಗ್‌ಬಾಸ್‌ ಮನೆಯಿಂದ ಆಚೆ ಹೋಗೋದಿಲ್ಲ ಎಂಬ ನಂಬಿಕೆಯಲ್ಲಿದ್ದ ನಿರಂಜನ್‌ಗೆ ದೊಡ್ಡ ಒಂದು ಶಾಕ್ ಕಾದಿತ್ತು. ಕೊನೆಗೆ ನಿರಂಜನ್‌ ಮನೆಯಿಂದ ಆಚೆ ಬರುವ ಸಮಯದಲ್ಲಿ ಬಿಗ್‌ಬಾಸ್‌ ಅವರಿಗೊಂದು ವಿಶೇಷ ಅಧಿಕಾರವನ್ನ ನೀಡಿದರು. ಇದರ ಪ್ರಕಾರ ಬಿಗ್‌ಬಾಸ್‌ ಮನೆಯ ದ್ವಾರಪಾಲಕರಾಗಿ ಕೆಲಸ ನಿರ್ವಹಿಸುವಂತೆ ಮನೆಯ ಒಬ್ಬರನ್ನು ಸೂಚಿಸುವಂತೆ ಆದೇಶಿಸಲಾಯಿತು. ಈ ಕೆಲಸಕ್ಕೆ ಹೊಸದಾಗಿ ಮನೆಗೆ ಬಂದ ಮಸ್ತಾನ್‌ರನ್ನ ದ್ವಾರಪಾಲಕಾನಾಗಿ ನೇಮಿಸಿ ನಿರಂಜನ್ ಹೊರಬಂದರು.

Comments are closed.