ಮನೋರಂಜನೆ

ಅತ್ಯಾಚಾರಿಗಳನ್ನು ನಪುಂಸಕರನ್ನಾಗಿಸಿ: ನಟಿ ಮೀರಾ ಜಾಸ್ಮಿನ್

Pinterest LinkedIn Tumblr

meera-jasmineಕೊಚ್ಚಿ: ದೇಶದಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರಗಳ ಕುರಿತು ಕಿಡಿಕಾರಿದ ನಟಿ ಮೀರಾ ಜಾಸ್ಮಿನ್, ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡುವ ಅಂದರೆ ನಪುಂಸಕರನ್ನಾಗಿ ಮಾಡುವುದು ಎಂದು ಮೀರಾ ಆಕ್ರೋಶದಿಂದ ಹೇಳಿದರು.

ಮೀರಾ ಜಾಸ್ಮಿನ್ ಹಾಗೂ ನಟ ಅನೂಪ್ ಮೆನನ್ ಪೆರುಂಬಾವೂರಿನಲ್ಲಿ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯ ತಾಯಿ ಯನ್ನು ಭೇಟಿಯಾದ ಸಂದರ್ಭ ಮೀರಾ, ಇಂತಹ ಅಪರಾಧಗಳಿಗೆ ಶಿಕ್ಷಿಸಲು ಕಾನೂನಿನಲ್ಲಿ ಸಾಕಷ್ಟು ಅವಕಾಶಗಳು ಇಲ್ಲ ಎಂದರು.

ಕಾಮುಕರನ್ನು ನಪುಂಸಕರನ್ನಾಗಿ ಮಾಡುವ ಮೂಲಕ ಅತ್ಯಾಚಾರದಂತಹ ಕೃತ್ಯಗಳನ್ನು ತಡೆಯಬೇಕಿದೆ. ಈ ರೀತಿಯ ಕಠಿಣ ಶಿಕ್ಷೆಯಿಂದ ಪುರುಷರು ತಮ್ಮ ಜೀವನದಲ್ಲಿ ಬೇರೆ ಮಹಿಳೆಯನ್ನು ಮುಟ್ಟಲೂ ಹೋಗಲ್ಲ ಎಂದು ನಟಿ ಹೇಳಿದರು.

ಪೆರುಂಬಾವೂರ್‌ನಲ್ಲಿ ದಲಿತ ಬಾಲಕಿಯ ಮೇಲೆ ರೇಪ್ ಎಸಗಿ, ಕೊಲೆ ಮಾಡಲಾಗಿತ್ತು.

Comments are closed.